ಭಾನುವಾರ, ಡಿಸೆಂಬರ್ 8, 2019
21 °C

ಇಂದಿನಿಂದ ಚಿನ್ನದ ಬಾಂಡ್‌

Published:
Updated:
ಇಂದಿನಿಂದ ಚಿನ್ನದ ಬಾಂಡ್‌

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ (2017–18) ಚಿನ್ನದ ಬಾಂಡ್‌ ಯೋಜನೆಗೆ ಸೋಮವಾರ ಚಾಲನೆ ದೊರೆಯಲಿದೆ.

ಜುಲೈ 10ರಿಂದ ಐದು ದಿನಗಳವರೆಗೆ ಅಂದರೆ ಜುಲೈ 14 ರವರೆಗೆ ಬಾಂಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಈ 9ನೇ ಕಂತಿನ ಚಿನ್ನದ ಬಾಂಡ್ ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹2,780 ನಿಗದಿ ಮಾಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ₹2,901 ನಿಗದಿ ಮಾಡಲಾಗಿತ್ತು.

ಬ್ಯಾಂಕ್‌ಗಳು, ಸ್ಟಾರ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ  ಲಿಮಿಟೆಡ್‌ (ಎಸ್‌ಎಚ್‌ಸಿಐಎಲ್‌), ಅಂಚೆ ಕಚೇರಿಗಳು, ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿಯೂ ಚಿನ್ನದ ಬಾಂಡ್‌ ವಿತರಣೆ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಚಿನ್ನ ಮತ್ತು ಆಭರಣ ಒಕ್ಕೂಟ (ಸೋಮವಾರದಿಂದ ಶುಕ್ರವಾರ) 999 ಶುದ್ಧತೆಯ ಚಿನ್ನಕ್ಕೆ ಒಂದು ವಾರಕ್ಕೆ ನಿಗದಿಪಡಿಸುವ ಬೆಲೆಯನ್ನು ಆಧರಿಸಿ ಬಾಂಡ್‌ ಬೆಲೆ ನಿಗದಿಪಡಿಸಲಾಗುವುದು ಎಂದು ಆರ್‌ಬಿಐ ಹೇಳಿದೆ.ಭೌತಿಕ ಸ್ವ

ರೂಪದ ಚಿನ್ನದ ಬೇಡಿಕೆಯನ್ನು ತಗ್ಗಿಸುವ ಉದ್ದೇಶದಿಂದ 2015ರ ನವೆಂಬರ್‌ನಲ್ಲಿ ಚಿನ್ನದ ಬಾಂಡ್‌ ಯೋಜನೆಗೆ ಚಾಲನೆ ನೀಡಲಾಗಿದೆ.

**

ಯೋಜನೆ ವಿವರ

* ಬಾಂಡ್‌ ಮಿತಿ ಕನಿಷ್ಠ 1 ಗ್ರಾಂ

* ಬಾಂಡ್‌ ಗರಿಷ್ಠ ಮಿತಿ 500 ಗ್ರಾಂ

* ಬಾಂಡ್‌ ಅವಧಿ 8 ವರ್ಷ

* ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 2,780

* ವಾರ್ಷಿಕ ಬಡ್ಡಿದರ ಶೇ 2.50

* ಬಾಂಡ್‌ ಮೌಲ್ಯ ಪಾವತಿ ₹20 ಸಾವಿರದವರೆಗೆ ನಗದು

* ₹20 ಸಾವಿರಕ್ಕಿಂತ ಹೆಚ್ಚಿದ್ದರೆ ಡಿ.ಡಿ., ಚೆಕ್‌, ಆನ್‌ಲೈನ್‌ ಪಾವತಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

* 2016–17ರಲ್ಲಿ 8 ಕಂತುಗಳಿಂದ ₹5,400 ಕೋಟಿ ಸಂಗ್ರಹಿಸಲಾಗಿದೆ

ಪ್ರತಿಕ್ರಿಯಿಸಿ (+)