ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಎಸ್ ಹಿಡಿತ ತಪ್ಪಿದ ಮೋಸುಲ್

ಉಗ್ರರಿಂದ ಸ್ವತಂತ್ರ– ಇರಾಕ್ ಪ್ರಧಾನಿ ಘೋಷಣೆ
Last Updated 9 ಜುಲೈ 2017, 18:48 IST
ಅಕ್ಷರ ಗಾತ್ರ

ಮೋಸುಲ್‌ (ಇರಾಕ್‌): ‘ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರ ಹಿಡಿತದಲ್ಲಿದ್ದ ಮೋಸುಲ್‌ ನಗರ ಸ್ವತಂತ್ರಗೊಂಡಿದೆ’ ಎಂದು ಇರಾಕ್‌ ಪ್ರಧಾನಿ ಹೈದರ್ ಅಲ್– ಅಬಾದಿ ಭಾನುವಾರ ಘೋಷಿಸಿದ್ದಾರೆ.

ಐ.ಎಸ್‌್ ಉಗ್ರರ ವಿರುದ್ಧ ಸಾಧಿಸಿದ ಅತಿದೊಡ್ಡ ವಿಜಯ ಇದಾಗಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲೂ ನಗರದಿಂದ ಗುಂಡಿನ ದಾಳಿ ಮತ್ತು ವಾಯು ದಾಳಿಯ ಶಬ್ದ ಕೇಳಿಬರುತ್ತಿತ್ತು. ಇದರಿಂದ ಹೋರಾಟ ಇನ್ನೂ ಸಂಪೂರ್ಣ ಅಂತ್ಯಗೊಂಡಿಲ್ಲ ಎಂದು ಹೇಳಲಾಗಿದೆ. ಆದರೂ ಇರಾಕ್‌ ಭದ್ರತಾ ಪಡೆಗಳ ಈ ವಿಜಯವನ್ನು ಮೈಲುಗಲ್ಲು ಎಂದೇ ಬಣ್ಣಿಸಲಾಗಿದೆ. 

ಮೋಸುಲ್‌ಗೆ ಭೇಟಿ ನೀಡಿದ ಪ್ರಧಾನಿ, ಉಗ್ರರ ವಿರುದ್ಧ ಹೋರಾಡಿದ ಯೋಧರನ್ನು ಅಭಿನಂದಿಸಿದರು. ಮೋಸುಲ್‌ನಲ್ಲಿ ಇರಾಕಿ ಪಡೆಗಳು ಒಂಬತ್ತು ತಿಂಗಳಿನಿಂದ ಉಗ್ರರ ವಿರುದ್ಧ ಹೋರಾಟ ನಡೆಸಿದ್ದವು.

ಅಮೆರಿಕದ ನೇತೃತ್ವದಲ್ಲಿ ವೈಮಾನಿಕ ದಾಳಿಯೂ ನಡೆದದ್ದರಿಂದ ಉಗ್ರರು ತಮ್ಮ ಹಿಡಿದಲ್ಲಿದ್ದ ಸಾಕಷ್ಟು ಪ್ರದೇಶವನ್ನು ಕಳೆದುಕೊಂಡಿದ್ದಾರೆ. 

ಮೋಸುಲ್‌ ಮರುವಶ  ಕಾರ್ಯಾಚರಣೆಯನ್ನು ಇರಾಕಿ ಪಡೆಗಳು ಕಳೆದ ಅಕ್ಟೋಬರ್‌ನಿಂದಲೇ ಆರಂಭಿಸಿದ್ದವು. ಈ ವರ್ಷದ ಜನವರಿಯಲ್ಲಿ ಪೂರ್ವ ಭಾಗವನ್ನು ವಶಕ್ಕೆ ಪಡೆದಿದ್ದವು. ಆದರೆ ಉಗ್ರರು ಟೈಗ್ರಿಸ್‌ ನದಿಯ ದಂಡೆಯ ಮೇಲಿರುವ ಜನದಟ್ಟಣೆಯ ನಗರವನ್ನು ಪ್ರವೇಶ ಮಾಡಿದ ನಂತರ ಯೋಧರಿಗೆ  ಹೋರಾಟ ಕಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT