ಶನಿವಾರ, ಡಿಸೆಂಬರ್ 14, 2019
21 °C

ಏರ್‌ ಇಂಡಿಯಾದ ಎಕಾನಮಿ ಕ್ಲಾಸ್‌ ಪ್ರಯಾಣದಲ್ಲಿ ಮಾಂಸಾಹಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾದ ಎಕಾನಮಿ ಕ್ಲಾಸ್‌ ಪ್ರಯಾಣದಲ್ಲಿ ಮಾಂಸಾಹಾರ ಸ್ಥಗಿತ

ನವದೆಹಲಿ: ಏರ್‌ ಇಂಡಿಯಾ ತನ್ನ ದೇಶೀಯ ಸಂಚಾರದ ವಿಮಾನಗಳ ಎಕಾನಮಿ ಕ್ಲಾಸ್‌ನಲ್ಲಿ ಆಹಾರ ಸೇವೆಯನ್ನು ಸುಧಾರಿಸುವ ಮತ್ತು ನಷ್ಟ ತಗ್ಗಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಮಾಂಸಾಹಾರ ಒದಗಿಸುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದೆ.

ನಷ್ಟ ತಗ್ಗಿಸುವ ಮತ್ತು ಆಹಾರ ಸೇವೆ ಸುಧಾರಿಸುವ ನಿಟ್ಟಿನಲ್ಲಿ ದೇಶೀಯ ವಿಮಾನ ಸಂಚಾರದ ಎಕಾನಮಿ ಕ್ಲಾಸ್‌ನಲ್ಲಿ ಮಾಂಸಾಹಾರ ಸ್ಥಗಿತಗೊಳಿಸುವ ‘ಜಾಗೃತ ನಿರ್ಧಾರ’ವನ್ನು ಏರ್‌ ಇಂಡಿಯಾ ಕೈಗೊಂಡಿದೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಕ್ತಾರ ಜಿ.ಪಿ. ರಾವ್‌ ಹೇಳಿದ್ದಾರೆ.

‘ನಷ್ಟವನ್ನು ತಗ್ಗಿಸಲು, ವೆಚ್ಚವನ್ನು ಕಡಿಮೆಗೊಳಿಸಲು ಮತ್ತು ಅಡುಗೆ ಸೇವೆಯನ್ನು ಸುಧಾರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ವಿಮಾನಯಾನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ನಿರ್ಧಾರವನ್ನು ಜೂನ್‌ ಮಧ್ಯೆ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಎಕ್ಸಿಕ್ಯೂಟಿವ್‌ ಮತ್ತು ಎಕಾನಮಿ ಕ್ಲಾಸ್‌ನ ಪ್ರಯಾಣಿಕರಿಗೆ ಮಾಂಸಾಹಾರ ಸೇವೆ ಒದಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಕ್ರಮವು ನಷ್ಟ ಮತ್ತು ವೆಚ್ಚವನ್ನು ಕಡಿತಗೊಳಿಸುವಲ್ಲಿ ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಒಂದು ಅಂದಾಜಿನ ಪ್ರಕಾರ ಏರ್ ಇಂಡಿಯಾಕ್ಕೆ ವಾರ್ಷಿಕ ಸುಮಾರು ₹7ರಿಂದ 8 ಕೋಟಿ ಉಳಿತಾಯ ಆಗಲಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಲ್ಲಿ ವಾರ್ಷಿಕ ₹400 ಕೋಟಿಯನ್ನು ಆಹಾರ ಸೇವೆ ಒದಗಿಸಲು ವೆಚ್ಚ ಮಾಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)