ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಅಮೆರಿಕ–ಜಪಾನ್ ಜಂಟಿ ನೌಕಾ ಸಮರಾಭ್ಯಾಸ

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಪ್ರಬಲವಾದ ಸೇನಾ ಬಾಂಧವ್ಯ ಸಾಧಿಸುವ ನಿಟ್ಟಿನಲ್ಲಿ ಅಮೆರಿಕ, ಜಪಾನ್ ಮತ್ತು ಭಾರತ ಸೋಮವಾರ ‘ತ್ರಿಕೋನ ಮಲಬಾರ್ ನೌಕಾ ಸಮರಾಭ್ಯಾಸ– 2017’ ಆರಂಭಿಸಿವೆ.

ಬಂಗಾಳ ಕೊಲ್ಲಿಯಲ್ಲಿ ನಡೆಯುವ ಈ ತ್ರಿಪಕ್ಷೀಯ ಸಮರಾಭ್ಯಾಸದಲ್ಲಿ ಅಮೆರಿಕದ ಏಳು, ಜಪಾನ್‌ನ ಎರಡು ನೌಕೆಗಳ ಜೊತೆಗೆ ಭಾರತದ ‘ಐಎನ್‌ಎಸ್ ಜಲಾಶ್ವ’ ಮತ್ತು ‘ಐಎನ್ಎಸ್ ವಿಕ್ರಮಾದಿತ್ಯ’ ಪಾಲ್ಗೊಳ್ಳಲಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸಮುದ್ರ ಮತ್ತು ಸಮುದ್ರ ದಂಡೆಯಲ್ಲಿ ನಡೆಯುವ ಈ ಸಮರಾಭ್ಯಾಸದಲ್ಲಿ ವೈದ್ಯಕೀಯ ಕಾರ್ಯಾಚರಣೆ, ವಿಪತ್ತು ನಿಯಂತ್ರಣ, ಸ್ಫೋಟಕ ಸಾಧನ ವಿಲೇವಾರಿ, ಹೆಲಿಕಾಪ್ಟರ್ ಕಾರ್ಯಾಚರಣೆ ಮತ್ತು ಜಲಾಂತರ್ಗಾಮಿ ಯುದ್ಧ ನಿಗ್ರಹ ಕಾರ್ಯಾಚರಣೆಗಳ ಅಭ್ಯಾಸ ಮಾಡಲಾಗುತ್ತದೆ.

‘ಇಂಡೊ– ಏಷ್ಯಾ ಪೆಸಿಫಿಕ್ ಕಾರ್ಯಾಚರಣೆಯ ಸದಸ್ಯರಾದ ಈ ಮೂರು ರಾಷ್ಟ್ರಗಳ ನೌಕಾ ಪಡೆಗಳ ನಡುವೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಹೊಂದಾಣಿಕೆ ಇದೆ. ವೈಯಕ್ತಿಕ ಬಾಂಧವ್ಯ ಬೆಳೆಸುವುದು ಈ ಸಮರಾಭ್ಯಾಸದ ಆಶಯ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸಿಕ್ಕಿಂ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಉದ್ಭವಿಸಿರುವ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತನ್ನ ನೌಕಾ ಬಲವನ್ನು ಹೆಚ್ಚಿಸಿಕೊಳ್ಳಲು ಚೀನಾ ಯತ್ನಿಸುತ್ತಿರುವ ನಡುವೆಯೇ ಈ ತ್ರಿಪಕ್ಷೀಯ ಸಮರಾಭ್ಯಾಸ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT