ಭಾನುವಾರ, ಡಿಸೆಂಬರ್ 15, 2019
17 °C

‘ರೋಗಗಳಿಗೆ ಸಿರಿಧಾನ್ಯ ರಾಮಬಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೋಗಗಳಿಗೆ ಸಿರಿಧಾನ್ಯ ರಾಮಬಾಣ’

ಬೆಂಗಳೂರು: ‘ವಿವಿಧ ಮಾರಕ ರೋಗಗಳಿಗೆ ಸಿರಿಧಾನ್ಯಗಳು ರಾಮಬಾಣವಾಗಿವೆ’ ಎಂದು ಹೋಮಿಯೋಪಥಿ ವೈದ್ಯ ಡಾ.ಖಾದರ್ ಹೇಳಿದರು.

ಬಿಜೆಪಿ ಮಹದೇವಪುರ ಕ್ಷೇತ್ರ ಘಟಕದ ವತಿಯಿಂದ ವೈಟ್‌ಫೀಲ್ಡ್‌ನಲ್ಲಿ ಆಯೋಜಿಸಿದ್ದ ‘ಸಿರಿಧಾನ್ಯ ಸಂಭ್ರಮ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದ ಪಾರಂಪರಿಕ ಆಹಾರ ಧಾನ್ಯಗಳಲ್ಲಿ ರೋಗ ನಿರೋಧಕ ಶಕ್ತಿ ಇದೆ. ಈ ಧಾನ್ಯಗಳ ಬಳಕೆಯಿಂದ ನಿರೋಗಿಗಳಾಗಿ ಬದುಕಬಹುದು’ ಎಂದರು.

‘ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಾಗಿದ್ದು, ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತದೆ. ಸಕ್ಕರೆ ಅಂಶವನ್ನು ರಕ್ತನಾಳಗಳಿಗೆ ನೇರವಾಗಿ ಸೇರಲು ಬಿಡುವುದಿಲ್ಲ. ಇದರಿಂದ ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.

‘ರಾಗಿ, ಹಾರಕ, ನವಣೆ, ಊದಲು, ಕೊರಲೆಯಂತಹ ಸಿರಿಧಾನ್ಯಗಳು ನಮ್ಮ ಆಹಾರ ಪದ್ಧತಿಯ ಮೂಲ ಧಾನ್ಯಗಳು. ಆದರೆ, ರೋಗನಿರೋಧಕ ಶಕ್ತಿಯನ್ನು ಕುಂದಿಸುವ ವಿಷಯುಕ್ತ ಆಹಾರವನ್ನು ಜನರು ಇಂದು ಹೆಚ್ಚಾಗಿ ತಿನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಅರವಿಂದ ಲಿಂಬಾವಳಿ, ‘ನಮ್ಮ ಆಹಾರ ಪದ್ಧತಿಯಲ್ಲೇ ಔಷಧ ಗುಣವಿದೆ. ಆದರೆ, ನಾವು ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿದ್ದೇವೆ. ಇದರಿಂದ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದೇವೆ. ಇನ್ನಾದರೂ ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಸಿರಿಧಾನ್ಯಗಳು ಮತ್ತು ಆಯುರ್ವೇದ ಔಷಧಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು.

ಪ್ರತಿಕ್ರಿಯಿಸಿ (+)