ಮಂಗಳವಾರ, ಡಿಸೆಂಬರ್ 10, 2019
18 °C

ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಅಗತ್ಯ

ಚಿಕ್ಕಮಗಳೂರು: ಕಾನೂನಾತ್ಮಕ ನಿರ್ಬಂಧಗಳನ್ನು ಹೇರುವ ಮೂಲಕ ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಕ್ರಮವಹಿಸುವ ಅಗತ್ಯ ಇದೆ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್‌.ಮಹೇಶ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನರ್ಸಿಂಗ್ ಶಾಲೆಗಳು, ಪ್ಯಾರಾ ಮೆಡಿಕಲ್‌ ಕಾಲೇಜುಗಳ ಸಹಯೋಗ ದಲ್ಲಿ ನಗರದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

‘2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ 127 ಕೋಟಿ. ವಿಶ್ವ ದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿ ರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ’ ಎಂದು ಹೇಳಿದರು.

‘ಜನಸಂಖ್ಯೆಯನ್ನು ಆಧರಿಸಿ ಯೋಜ ನೆಗಳನ್ನು ರೂಪಿಸಲಾಗುತ್ತದೆ. ಜನಸಂಖ್ಯೆ ಯನ್ನು ನಿಯಂತ್ರಿಸಿದರೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಕಡಿವಾಣ ಹಾಕದಿದ್ದರೆ ಮುಂದಿನ 10 ವರ್ಷಗಳಲ್ಲಿ ಜನಸಂಖ್ಯೆ ಯಲ್ಲಿ ಭಾರತವು ಚೀನಾವನ್ನು ಮೀರಿಸುತ್ತದೆ’ ಎಂದು ಹೇಳಿದರು.

‘ಭಾರತದಲ್ಲಿ ಬಹಳಷ್ಟು ಸಮಸ್ಯೆ ಗಳಿಗೆ ಜನಸಂಖ್ಯೆಯೇ ಕಾರಣವಾಗಿದೆ.  ಜನಸಂಖ್ಯೆ ನಿಯಂತ್ರಣ ನಿಟ್ಟಿನಲ್ಲಿ ಸಾರ್ವ ಜನಿಕರ ಸಹಕಾರ ಅಗತ್ಯ. ಹೆಣ್ಣಿರಲಿ, ಗಂಡಿರಲಿ ಒಂದೇ ಮಗು ಸಾಕು ಎಂಬುದನ್ನು ಕಡ್ಡಾಯವಾಗಿ ಪಾಲಿಸಬೇಕು. ಜನಸಂಖ್ಯಾ ಸ್ಫೋಟದ ದುಷ್ಪರಿ ಣಾಮಗಳನ್ನು ಜನರಿಗೆ ತಿಳಿಸಬೇಕು. ಕುಟುಂಬ ಯೋಜನೆ ಅರಿವು ಮೂಡಿ ಸಬೇಕು’ ಎಂದು ಸಲಹೆ ನೀಡಿದರು.

‘ಹೊಸ ಅಲೆ, ಹೊಸ ವಿಶ್ವಾಸ, ಸಂಪೂರ್ಣ ಜವಾಬ್ದಾರಿಯಿಂದ ಕುಟುಂಬದ ವಿಕಾಸ ಎಂಬುದು ಈ ಬಾರಿಯ ಜನಸಂಖ್ಯಾ ದಿನದ ಘೋಷಣೆಯಾಗಿದೆ. ಜನಸಂಖ್ಯೆಯನ್ನು ನಿಯಂತ್ರಿಸುವುದರಿಂದ ಆಗುವ ಅನುಕೂಲಗಳ ಕುರಿತು ಜನರಿಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಹೇಳಿದರು.

ಐಡಿಎಸ್‌ಜಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಿ.ಪಿ. ನಾರಾಯಣಸ್ವಾಮಿ ಅವರು ಜನಸಂಖ್ಯಾ ಸ್ಫೋಟ ಕುರಿತು ಉಪನ್ಯಾಸ ನೀಡಿದರು.

ಜನಸಂಖ್ಯಾಸ್ಫೋಟದ ದುಷ್ಪರಿಣಾ ಮಗಳ ಕುರಿತು ನಾಟಕವನ್ನು ಪ್ರದರ್ಶಿ ಸಲಾಯಿತು.

ಜಿಲ್ಲಾ ಪಂಚಾಯಿತಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾ ರದ ಅಧ್ಯಕ್ಷ ಸೈಯದ್‌ ಹನೀಫ್‌, ಜಿಲ್ಲಾ ಸರ್ಜನ್‌ ಡಾ.ಆರ್‌.ದೊಡ್ಡಮಲ್ಲಪ್ಪ, ಜಿಲ್ಲಾ ಕುಟಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್‌ ಬಾಬು, ಡಾ.ಎಸ್‌.ಜಿ.ಕಿರಣ್‌, ಡಾ.ಬಾಲ ಕೃಷ್ಣ, ಡಾ.ಲೋಕೇಶ್‌ ಇದ್ದರು.

ಕಾರ್ಯಕ್ರಮಕ್ಕೂ ಮುನ್ನಾ ತಾಲ್ಲೂಕು ಕಚೇರಿ ಆವರಣದಿಂದ ಅಂಬೇಡ್ಕರ್‌ ಭವನದವರೆಗೆ ಜಾಥಾ ನಡೆಯಿತು.

ಅನುಷ್ಠಾನ ಆಗಬೇಕು

‘ಚೀನಾದಲ್ಲಿ ದಂಪತಿಗೆ ಒಂದೇ ಮಗು ಎಂಬ ನಿಯಮವನ್ನು ಜಾರಿಗೊಳಿ ಸಲಾಗಿದೆ. ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದರೆ ಆ ಕುಟುಂ ಬಕ್ಕೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತದೆ. ಇಂಥ ನಿಯಮಗಳನ್ನು ಭಾರತ ದಲ್ಲಿಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊ ಳಿಸಬೇಕು’ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್‌.ಮಹೇಶ್‌ ಹೇಳಿದರು.

ಪ್ರತಿಕ್ರಿಯಿಸಿ (+)