ಸೋಮವಾರ, ಡಿಸೆಂಬರ್ 9, 2019
26 °C

ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್‌ ನಿರ್ಧಾರ

Published:
Updated:
ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್‌ ನಿರ್ಧಾರ

ಬೆಂಗಳೂರು: ಇನ್ನು ಮುಂದೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಟ ಸುದೀಪ್‌ ನಿರ್ಧರಿಸಿದ್ದಾರೆ.

ತಮ್ಮ ನಿರ್ಧಾರದ ಪತ್ರವನ್ನು ಸುದೀಪ್‌ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

‘ಹುಟ್ಟು ಹಬ್ಬದ ನೆಪದಲ್ಲಿ ದುಂದು ವೆಚ್ಚ ಮಾಡುವ ಬದಲು ಆ ಹಣವನ್ನು ಬಡವರಿಗೆ ದಾನ ಮಾಡಿ. ಅದೇ ನೀವು ನನಗೆ ನೀಡುವ ನಿಜವಾದ ಉಡುಗೊರೆ’ ಎಂದು ಸುದೀಪ್‌ ಈ ಪತ್ರದಲ್ಲಿ ಮನವಿ ಮಾಡಿದ್ದಾರೆ.

‘ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಎಷ್ಟೋ ಮೈಲಿ ದೂರದಿಂದ ಅಭಿಮಾನಿಗಳು ಹಣ ಖರ್ಚು ಮಾಡಿಕೊಂಡು ಬರುತ್ತಾರೆ. ನನ್ನ ಹುಟ್ಟು ಹಬ್ಬಕ್ಕಾಗಿ ಕೇಕ್‌, ಹಾರಗಳು ಮತ್ತಿತರ ಉಡುಗೊರೆಗಳನ್ನು ತರುತ್ತಾರೆ. ಇದರಿಂದ ಸಾಕಷ್ಟು ಹಣ ವ್ಯರ್ಥವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಅಭಿಮಾನಿಗಳು ನನ್ನ ಹುಟ್ಟು ಹಬ್ಬಕ್ಕಾಗಿ ಹಣ ಖರ್ಚು ಮಾಡುವ ಬದಲು ದಿನಕ್ಕೆ ಒಂದು ಹೊತ್ತಿನ ಊಟವೂ ಕನಸಾಗಿರುವಂಥ ಜನರಿಗೆ ಆ ಹಣ ನೀಡಿ’ ಎಂದು ಸುದೀಪ್‌ ಹೇಳಿದ್ದಾರೆ.

‘ಇನ್ನು ಮುಂದೆ ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ. ಅಂದು ನಾನು ಮನೆಯಿಂದ ದೂರ ಇರುತ್ತೇನೆ. ಮತ್ತು ನಿಮಗೆ ಏನು ಮಾಡಿ ಎಂದು ಮನವಿ ಮಾಡಿದ್ದೇನೋ ಆ ಕೆಲಸವನ್ನು ನಾನೂ ಮಾಡುತ್ತೇನೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)