ಬುಧವಾರ, ಡಿಸೆಂಬರ್ 11, 2019
19 °C

ಸುಝುಕಿಯಿಂದ ಡ್ಯುಯಲ್ ಟೋನ್ ಲೆಟ್ಸ್

Published:
Updated:
ಸುಝುಕಿಯಿಂದ ಡ್ಯುಯಲ್ ಟೋನ್ ಲೆಟ್ಸ್

ಸುಝುಕಿ ಕಂಪೆನಿಯು ತನ್ನ ಆಟೊಮೆಟಿಕ್ ಸ್ಕೂಟರ್ ಮಾದರಿ ಲೆಟ್ಸ್ ಅನ್ನು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಪರಿಚಯಿಸಿದೆ.

ವಿನ್ಯಾಸ ಹಾಗೇ ಉಳಿದುಕೊಂಡಿದೆ. ಆದರೆ ಈ ಹೊಸ ಸ್ಕೂಟರಿನ ಬ್ಲ್ಯಾಕ್‌ ಫಿನಿಶಿಂಗ್‌ ಚಕ್ರಗಳು ಸ್ಕೂಟರ್‌ಗೆ ಸ್ಪೋರ್ಟಿ ಲುಕ್ ಕೊಟ್ಟಿದೆ.

ಸ್ಕೂಟರ್‌ನ ತಾಂತ್ರಿಕತೆಯಲ್ಲೂ ಗ್ರಾಹಕರಿಗೆ ಸಾಕಷ್ಟು ವಿಷಯಗಳಿವೆ. 112.8 ಸಿಸಿ ಎಂಜಿನ್ 8.2 ಬಿಎಚ್‌ಪಿ ಹಾಗೂ 8.8 ಎನ್‌ಎಂ ಶಕ್ತಿ ಉತ್ಪಾದಿಸಲಿದೆ. BS-IV ಕಾಂಪ್ಲಿಯಂಟ್ ಮೋಟಾರಿಗೆ ಸಿವಿಟಿ ಯುನಿಟ್ ಇದ್ದು, ಇಂಧನ ಕ್ಷಮತೆ ನೀಡಲಿದೆ.

5.2 ಲೀಟರ್ ಈ ಸ್ಕೂಟರ್‌ನ ಇಂಧನ ಟ್ಯಾಂಕ್ ಸಾಮರ್ಥ್ಯ. ಲೀಟರ್‌ಗೆ 63 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪೆನಿ ಹೇಳಿಕೊಂಡಿದೆ. ಮುಂಬದಿ ಹಾಗೂ ಹಿಂಬದಿ 120 ಎಂಎಂ ಡ್ರಂ ಬ್ರೇಕ್ ಅಳವಡಿಸಲಾಗಿದ್ದು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಇದೆ.

ರಾಯಲ್ ಬ್ಲ್ಯೂ/ಮ್ಯಾಟ್ ಬ್ಲ್ಯಾಕ್‌ (ಬಿಎನ್‌ಯು), ಆರೆಂಜ್/ಮ್ಯಾಟ್ ಬ್ಲ್ಯಾಕ್‌ (ಜೆಟಿಡಬ್ಲ್ಯು), ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್‌ (ವೈವಿಬಿ) ಡ್ಯುಯಲ್ ಟೋನ್‌ನ ಬಣ್ಣಗಳ ಆಯ್ಕೆಗಳಲ್ಲಿ ಸ್ಕೂಟರ್ ಲಭ್ಯ. ಇದರ ಬೆಲೆ ₹48,193 (ದೆಹಲಿ ಎಕ್ಸ್ ಶೋ ರೂಂ) ಎಂದು ತಿಳಿದುಬಂದಿದೆ.

*ಟಾಟಾ ನೆಕ್ಸಾನ್‌ನಿಂದ ಕಾಂಪಾಕ್ಟ್ ಎಸ್‌ಯುವಿ

2016ರ ಆಟೊ ಎಕ್ಸ್‌ಪೊದಲ್ಲಿ ಸದ್ದು ಮಾಡಿದ್ದ, ತನ್ನ ಸಮಕಾಲೀನ ಸ್ಟೈಲಿಂಗ್ ಹಾಗೂ ಲುಕ್‌ನಿಂದಲೇ ಗಮನ ಸೆಳೆದಿದ್ದ ಟಾಟಾ ನೆಕ್ಸಾನ್ ಜೆನೆವಾ ಆವೃತ್ತಿಯ ಎಸ್‌ಯುವಿ ಇದೀಗ ಬಿಡುಗಡೆಗೆ ಸಜ್ಜಾಗಿದೆ.

ಈ ಎಸ್‌ಯುವಿನಲ್ಲಿ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಅದಕ್ಕೆ ತಕ್ಕಂತೆ ಸಿಗ್ನೇಚರ್ ಹ್ಯುಮಾನಿಟಿ ಲೈನ್ ಕ್ರೋಮ್ ಗ್ರಿಲ್, ಡಿಎಲ್ ಆರ್ ಇರುವ ಪ್ರೊಜೆಕ್ಟರ್ ಲ್ಯಾಂಪ್, ಸ್ಕ್ವೇರ್ ಬಾನೆಟ್, ರೂಫ್ ಮೌಂಟೆಡ್ ಸ್ಪಾಯ್ಲರ್, ವೀಲ್ ಆರ್ಚಸ್, ಫ್ಲೋಟಿಂಗ್ ರೂಫ್‌ಲೈನ್ ಇವೆಲ್ಲವನ್ನೂ ರೂಪಿಸಲಾಗಿದೆ.

ಐದು ಮಂದಿ ಆರಾಮಾಗಿ ಕೂರುವಂತೆ 60:40 ಸ್ಪ್ಲಿಟ್ ರಿಯರ್ ಸೀಟ್‌ ಇದ್ದು, ಕ್ಯಾಬಿನ್‌ಗಳನ್ನು ಅಚ್ಚುಕಟ್ಟಾಗಿ ರೂಪಿಸಲಾಗಿದೆ.

ಸುರಕ್ಷತೆ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹಾಗೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಗೊಳ್ಳುವ ಸೂಚನೆ ನೀಡಿದ್ದು, ಮೊದಲು ಡೀಸೆಲ್ ಆಯಾಮವನ್ನು ಹೊರತರಲಿದೆ.

ಡೀಸೆಲ್ ಹಾಗೂ ಪೆಟ್ರೋಲ್ ಎರಡೂ ಎಂಜಿನ್‌ನ ಆಯ್ಕೆಗಳನ್ನು ನೀಡಲಿದೆ. 1.2ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 105–110 ಬಿಎಚ್‌ಪಿ ಹಾಗೂ 170ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಇರಲಿದೆ. 1. ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನ್ಯುಯಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಇದೆ. ಪೆಟ್ರೋಲ್ 18 ಕಿ.ಮೀ ಹಾಗೂ ಡೀಸೆಲ್ 23 ಕಿ.ಮೀ ಮೈಲೇಜ್ ನೀಡಲಿದೆ.

ಬೇಸ್ ಮಾಡೆಲ್‌ಗೆ ₹6.50 ಲಕ್ಷ ಹಾಗೂ ಟಾಪ್ ಮಾಡೆಲ್‌ಗೆ ₹10.50 ಲಕ್ಷ ಬೆಲೆ ನಿಗದಿ ಮಾಡಲಾಗಿದೆ.

*

ಮಾರುತಿಯ ಐದು ಮಾದರಿಗೆ ಆಂಡ್ರಾಯ್ಡ್ ಆಟೊ ಸೇರ್ಪಡೆ

ನಿಮ್ಮ ಬಳಿ ಬಲೆನೊ, ಸಿಯಾಜ್, ಎರ್ಟಿಗಾ, ಎಸ್ ಕ್ರಾಸ್ ಅಥವಾ ವಿಟಾರಾ ಬ್ರೆಜ್ಜಾ ಕಾರು ಇದೆಯಾ? ಅದರಲ್ಲಿ ಸ್ಮಾರ್ಟ್‌ಪ್ಲೇ ಇನ್‌ಫೊಟೇನ್ಮೆಂಟ್ ಸಿಸ್ಟಂ ಇದೆಯೇ? ಹಾಗಿದ್ದರೆ ಅವನ್ನು ಅಪ್‌ಡೇಟ್‌ ಮಾಡಿಕೊಳ್ಳುವ ಅವಕಾಶವೂ ಬಂದಿದೆ.

ಇತ್ತೀಚಿನ ಮ್ಯಾಪ್ ಸಾಫ್ಟ್‌ವೇರ್ ಹಾಗೂ ಆಂಡ್ರಾಯ್ಡ್ ಆಟೊ ಕಂಪಾಟಿಬಿಲಿಟಿಯನ್ನು ಇದಾಗಲೇ ಇರುವ ಆಪಲ್ ಕಾರ್‌ಪ್ಲೇ ಜೊತೆ ಅಪ್‌ಡೇಟ್ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.

2.5ಜಿಬಿ ಅಪ್‌ಡೇಟ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದುವರೆಗೂ ಕೇವಲ ಮಾರುತಿ ಸುಝುಕಿ ಇಗ್ನಿಸ್ ಹಾಗೂ ನ್ಯೂಜೆನ್ ಡಿಸೈರ್ ಅಪ್‌ಡೇಟ್ ಆಗಿರುವ ಸುದ್ದಿಯಿದೆ.

ಮಾರುತಿಯ 7.0 ಇಂಚಿನ ಟಚ್ ಸ್ಕ್ರೀನ್ ಇನ್‌ಫೊಟೇನ್ಮೆಂಟ್ ಸಿಸ್ಟಂ, ಎಸ್‌ಕ್ರಾಸ್‌ನಲ್ಲಿದ್ದು, ಅದರಲ್ಲಿ ಬಿಲ್ಟ್ ಇನ್ ನೇವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಆಡಿಯೊ ಸ್ಟ್ರೀಮಿಂಗ್ ಹಾಗೂ ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯೂ ಇತ್ತು. ಇದೀಗ ಆಂಡ್ರಾಯ್ಡ್ ಆಟೊದ ಸೇರ್ಪಡೆಯೂ ಲಭ್ಯವಿದೆ.

2018ರಲ್ಲಿ ಆಟೊ ಎಕ್ಸ್‌ಪೊದಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿರುವ ಹೊಸ ಮಾರುತಿ ಸುಝುಕಿ ಸ್ವಿಫ್ಟ್‌ನಲ್ಲಿ ಅಪ್‌ಡೇಟ್ ಸಮೇತ ಎಲ್ಲಾ ಮನರಂಜನಾ ಆಯ್ಕೆಗಳು ಇರಲಿವೆ.

ಪ್ರತಿಕ್ರಿಯಿಸಿ (+)