ಶನಿವಾರ, ಡಿಸೆಂಬರ್ 7, 2019
16 °C

ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರೆನ್‌ ವಲಯದಲ್ಲಿನ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಬುಧವಾರ ಮರೆಯಲ್ಲಿ

ನಿಂತು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಫರ್ಕಿಯಾ ಗಲಿಯಲ್ಲಿ ಈ ಘಟನೆ ನಡೆದಿದೆ. ಪ್ರಾಣ ಕಳೆದುಕೊಂಡ ಇಬ್ಬರನ್ನು ಲ್ಯಾನ್ಸ್‌ ನಾಯಕ್‌ ಎಲ್‌.ಎನ್‌. ರಂಜಿತ್‌ ಸಿಂಗ್‌ ಮತ್ತು ರೈಫಲ್‌ಮನ್ ಸತೀಶ್‌ ಭಗತ್‌ ಎಂದು ಗುರುತಿಸಲಾಗಿದೆ. ಇವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ಸೇರಿದವರು. ದಾಳಿಯಲ್ಲಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಈ ಪ್ರದೇಶದಿಂದ ಪಾಕಿಸ್ತಾನದ ಉಗ್ರರು ಕಾಶ್ಮೀರ ಕಣಿವೆಯತ್ತ ನುಸುಳುತ್ತಾರೆ.

ಪ್ರತಿಕ್ರಿಯಿಸಿ (+)