ಬುಧವಾರ, ಡಿಸೆಂಬರ್ 11, 2019
20 °C

ಮಲಯಾಳಂನಲ್ಲೂ ‘ಡಿಜೆ’

Published:
Updated:
ಮಲಯಾಳಂನಲ್ಲೂ ‘ಡಿಜೆ’

ಇತ್ತೀಚೆಗೆ ಬಿಡುಗಡೆಯಾಗಿ ವಿಮರ್ಶಕರಿಂದ ಮಿಶ್ರ ‍ಪ್ರತಿಕ್ರಿಯೆ ಪಡೆದರೂ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗಿರುವ ಅಲ್ಲು ಅರ್ಜುನ್ ಅವರ ತೆಲುಗು ಚಿತ್ರ ‘ದುವ್ವಾಡ ಜಗನ್ನಾಥ’ (ಡಿಜೆ) ಚಿತ್ರ ಜುಲೈ 14ಕ್ಕೆ ಮಲೆಯಾಳಂನಲ್ಲಿ ಬಿಡುಗಡೆ ಆಗಲಿದೆ.

ಕೇರಳದಲ್ಲಿಯೂ ಭಾರಿ ಅಭಿಮಾನಿಗಳನ್ನು ಹೊಂದಿರುವ ಅಲ್ಲು ಅರ್ಜುನ್ ಅವರ ಮುಂಚಿನ ಕೆಲವು ಸಿನಿಮಾಗಳು ಮಲೆಯಾಳಂ ಭಾಷೆಗೆ ಡಬ್ ಆಗಿ ಹಿಟ್‌ ಆಗಿದ್ದವು. ಅಲ್ಲು ಅರ್ಜುನ್‌ ಅವರ ಈ ಹಿಂದಿನ ಚಿತ್ರ ‘ಸರೈನೋಡು’ ಕೇರಳದಲ್ಲಿ ಭಾರಿ ಹಿಟ್ ಎನಿಸಿಕೊಂಡಿತ್ತು.

ಜೂನ್ 23ರಂದು 1500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ಡಿಜೆ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಉತ್ತಮ ಚಿತ್ರಗಳನ್ನಷ್ಟೇ ನೋಡುವ ಬುದ್ಧಿವಂತ ಪ್ರೇಕ್ಷಕರೆಸಿಕೊಂಡಿರುವ ಮಲೆಯಾಳಿಗಳು ಡಿಜೆಯನ್ನು ಒಪ್ಪಿಕೊಳ್ಳುತ್ತಾರೋ ತಿರಸ್ಕರಿಸುತ್ತಾರೋ ಕಾದು ನೋಡಬೇಕು.

ಪ್ರತಿಕ್ರಿಯಿಸಿ (+)