ಶನಿವಾರ, ಡಿಸೆಂಬರ್ 14, 2019
21 °C

‘ಮೋದಿ ಬೆಳಗಲು ಸಂಘವೇ ಕಾರಣ’: ಮೋಹನ್ ಭಾಗವತ್‌

ಪಿಟಿಐ Updated:

ಅಕ್ಷರ ಗಾತ್ರ : | |

‘ಮೋದಿ ಬೆಳಗಲು ಸಂಘವೇ ಕಾರಣ’: ಮೋಹನ್ ಭಾಗವತ್‌

ನವದೆಹಲಿ: ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ ಇಷ್ಟೊಂದು ಉಜ್ವಲವಾಗಿ ಬೆಳಗಲು ಅವರು ಆರ್‌ಎಸ್‌ಎಸ್‌ನಲ್ಲಿ ಕಳೆದ ದಿನಗಳೇ ಕಾರಣ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅಭಿಪ್ರಾಯಪಟ್ಟರು.

ಒಂದು ವೇಳೆ ಮೋದಿ ಅವರು ಸಂಘದಲ್ಲಿಯೇ ಇದ್ದಿದ್ದರೆ ಇಷ್ಟು ಜನಪ್ರಿಯರಾಗಲು ಸಾಧ್ಯವಿರುತ್ತಿರಲಿಲ್ಲ ಎಂದೂ ಅವರು ಹೇಳಿದರು.

ಸುಲಭ್ ಇಂಟರ್‌ ನ್ಯಾಶನಲ್‌ ಮುಖ್ಯಸ್ಥ ಬಿಂದೇಶ್ವರ್‌ ಪಾಠಕ್‌ ರಚಿಸಿದ ‘ನರೇಂದ್ರ  ದಾಮೋದರ್‌ ದಾಸ್‌ ಮೋದಿ: ಮೇಕಿಂಗ್‌ ಆಫ್‌ ಲೆಜೆಂಡ್’ ಕೃತಿಯನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅಧಿಕಾರ ಮತ್ತು  ಜನಪ್ರಿಯತೆಯಿಂದ ಅವರು ಕೊಂಚವೂ  ಬದಲಾಗಿಲ್ಲ. ಈಗಲೂ ಅವರು   ಸಂಘದ ಸಾಮಾನ್ಯ ಸ್ವಯಂಸೇವಕನಂತೆಯೇ ಇದ್ದಾರೆ’ ಎಂದು ಶ್ಲಾಘಿಸಿದರು.

ಪ್ರತಿಕ್ರಿಯಿಸಿ (+)