ಶುಕ್ರವಾರ, ಡಿಸೆಂಬರ್ 6, 2019
17 °C

ಇದು ‘ಹೊಸ ಅನುಭವ’!

Published:
Updated:
ಇದು ‘ಹೊಸ ಅನುಭವ’!

ಎಂಬತ್ತರ ದಶಕದಲ್ಲಿ ‘ಅನುಭವ’ ಎಂಬ ಚಿತ್ರವೊಂದು ಬಂದಿತ್ತು. ಕಾಶೀನಾಥ್ ನಿರ್ದೇಶಿಸಿದ್ದ ಆ ಚಿತ್ರ ಸಾಕಷ್ಟು ಸುದ್ದಿಯನ್ನೂ ಮಾಡಿತ್ತು. ಈಗ, ಅಂದರೆ 2017ರಲ್ಲಿ, ’ಹೊಸ ಅನುಭವ’ ಎಂಬ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಇದರ ನಿರ್ದೇಶಕರು ಎಸ್. ಉಮೇಶ್. ’ಹೊಸ ಅನುಭವ’ ಚಿತ್ರವು ಕಾಶೀನಾಥ್‌ ನಿರ್ದೇಶನದ ’ಅನುಭವ’ ಚಿತ್ರದ ಮುಂದುವರಿಕೆಯೇ ಎಂದು ಪ್ರಶ್ನಿಸಬೇಡಿ! ಅದೇ ಬೇರೆ, ಇದೇ ಬೇರೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಹೊಸ ಚಿತ್ರದ ನಿರ್ಮಾಪಕರು ಬಿ.ಆರ್. ರಮಣಪ್ಪ. ಅವರು ಈ ಚಿತ್ರದಲ್ಲಿ ಒಂದು ಪಾತ್ರವನ್ನೂ ಮಾಡಿದ್ದಾರೆ. ಇದೊಂದು ಹಾಸ್ಯಮಯ ಚಿತ್ರ. ಇದರಲ್ಲಿ ಒಂದು ಸಂದೇಶ ಕೂಡ ಇದೆ ಎಂದು ಹೇಳಿಕೊಂಡಿದೆ ಚಿತ್ರತಂಡ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಈಚೆಗೆ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.

ಮೊದಲು ಮಾತು ಆರಂಭಿಸಿದ ರಮಣಪ್ಪ, ‘ಈ ಚಿತ್ರದ ಮೂಲಕ ನಾನು ಪಡೆದ ಅನುಭವವೆಲ್ಲ ಹೊಸದು. ಸಿನಿಮಾದ ದೃಶ್ಯಗಳು ಬಹಳ ಲವಲವಿಕೆಯಿಂದ ಕೂಡಿವೆ’ ಎಂದರು. ಸಿನಿಮಾ ಕುರಿತ ಪ್ರೀತಿ ಅವರು ನಿರ್ಮಾಣಕ್ಕೂ ಕೈಹಾಕುವಂತೆ ಮಾಡಿದೆಯಂತೆ.

‘ಸಿನಿಮಾದ ಕಥೆ ರಮಣಪ್ಪ ಅವರದ್ದು. ಈ ಸಿನಿಮಾ ಮಾಡಲು ನನಗೆ ಐವತ್ತು ದಿನ ಬೇಕಾಯಿತು. ಜನ ನಮ್ಮನ್ನು ತೀರಾ ಬಯ್ಯಬಾರದು ಅಂತ ಡಬಲ್ ಮೀನಿಂಗ್ ಸಂಭಾಷಣೆಗಳನ್ನು ಕಡಿಮೆ‌ ಮಾಡಿದ್ದೇನೆ’ ಎಂದರು ಉಮೇಶ್. ಚಿತ್ರದ ಸಹ – ನಿರ್ಮಾಪಕ ಕೆ. ಪದ್ಮನಾಭನ್ ಅವರು ಇದರಲ್ಲಿ ಖಳನಾಯಕನ ಪಾತ್ರ ನಿಭಾಯಿಸಿದ್ದಾರೆ.

‘ಸಿನಿಮಾದ ನಾಯಕ ನಟಿಗೆ ಹಿರೋಯಿನ್ ಆಗಬೇಕು ಎಂಬ ಆಸೆ‌. ಇಂತಹ ಆಸೆ ಇಟ್ಟುಕೊಂಡು ಬರುವವರನ್ನು ನಿರ್ದೇಶಕರು ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಕಥೆ ಸಿನಿಮಾದಲ್ಲಿ ಇದೆ’ ಎಂದರು ನಾಯಕಿ ಯಶಸ್ವಿನಿ.ಕೆ. ಪದ್ಮನಾಭನ್

ಪ್ರತಿಕ್ರಿಯಿಸಿ (+)