ಮಂಗಳವಾರ, ಡಿಸೆಂಬರ್ 10, 2019
18 °C

ಮಲಯಾಳ ನಟ ದಿಲೀಪ್‌ ವಿರುದ್ಧ ಮತ್ತಷ್ಟು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಯಾಳ ನಟ ದಿಲೀಪ್‌ ವಿರುದ್ಧ ಮತ್ತಷ್ಟು ಆರೋಪ

ತಿರುವನಂತಪುರ: ಮಲಯಾಳ ಸಿನಿಮಾ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತನಾಗಿರುವ ಜನಪ್ರಿಯ ನಟ ದಿಲೀಪ್‌ ಅವರ ವಿರುದ್ಧ ಇನ್ನಷ್ಟು ಆರೋಪಗಳು ಕೇಳಿ ಬಂದಿವೆ.

ಕಳೆದ ಮಾರ್ಚ್‌ನಲ್ಲಿ ನಟ ಕಲಾಭವನ್‌ ಮಣಿ ನಿಗೂಢವಾಗಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ದಿಲೀಪ್‌ ಅವರು ಪಾಲುದಾರರಾಗಿದ್ದ ರಿಯಲ್‌ ಎಸ್ಟೇಟ್‌ ವ್ಯವಹಾರವೇ ಕಾರಣ ಎಂದು ಸಿನಿಮಾ ರಂಗದ ಕೆಲವರು ಆರೋಪಿಸಿದ್ದಾರೆ.

‘ದಿಲೀಪ್‌ ಮತ್ತು ಮಣಿ ನಡುವೆ ರಿಯಲ್‌ ಎಸ್ಟೇಟ್‌ ವ್ಯವಹಾರ ಇತ್ತು. ಇದಕ್ಕೆ ಸಂಬಂಧಿಸಿ ದೂರವಾಣಿ ಮೂಲಕ ವ್ಯಕ್ತಿಯೊಬ್ಬರು ನನಗೆ ಕೆಲವು ಮಾಹಿತಿ ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಅದನ್ನು ನೀಡಿದ್ದೇನೆ’ ಎಂದು ಸಿನಿಮಾ ನಿರ್ದೇಶಕ ಬೈಜು ಕೊಟ್ಟಾರಕ್ಕರ ಎಂಬುವರು ತಿಳಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಟ ಮಣಿ ಅವರ ಒಳಾಂಗಗಳ ಪರೀಕ್ಷೆ ನಡೆಸಲಾಗಿದ್ದು, ಅವರ ಹೊಟ್ಟೆಯಲ್ಲಿ ಕೀಟನಾಶಕದ ಅಂಶಗಳು ಪತ್ತೆಯಾಗಿದ್ದವು.

**

ಹಣಕಾಸು ಸಂಬಂಧ ಇರಲಿಲ್ಲ: ನಟಿ ಸ್ಪಷ್ಟನೆ

ದಿಲೀಪ್‌ ಅವರ ಜತೆ ರಿಯಲ್‌ ಎಸ್ಟೇಟ್‌ ಮತ್ತು ಇತರ ಹಣಕಾಸು ವಹಿವಾಟಿನಲ್ಲಿ ಪಾಲುದಾರಿಕೆ ಇತ್ತು ಎಂಬ ಆರೋಪವನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಟಿ ನಿರಾಕರಿಸಿದ್ದಾರೆ. ತಾವು ಯಾರನ್ನೂ ಪ್ರಕರಣದಲ್ಲಿ ಸಿಕ್ಕಿಸಿ ಹಾಕಲು ಯತ್ನಿಸಿಲ್ಲ, ಯಾರ ಹೆಸರೂ ಹೇಳಿಲ್ಲ ಎಂದಿದ್ದಾರೆ.

‘ದಿಲೀಪ್‌ ಅವರ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಅವರ ಗೆಳೆತನದಿಂದ ದೂರವಾಗಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)