ಮಂಗಳವಾರ, ಡಿಸೆಂಬರ್ 10, 2019
16 °C

ಮಕ್ಕಳ ಅಶ್ಲೀಲ ವಿಡಿಯೊಗಳಿದ್ದ 3,500 ಜಾಲತಾಣ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ಮಕ್ಕಳ ಅಶ್ಲೀಲ ವಿಡಿಯೊಗಳಿದ್ದ 3,500 ಜಾಲತಾಣ ಸ್ಥಗಿತ

ನವದೆಹಲಿ : ‘ಮಕ್ಕಳನ್ನು ಬಳಸಿಕೊಂಡಿರುವ ಅಶ್ಲೀಲ ಚಲನಚಿತ್ರ, ದೃಶ್ಯಾವಳಿ (ವಿಡಿಯೊ ಕ್ಲಿಪ್‌) ಮತ್ತು ಚಿತ್ರಗಳನ್ನು ಹೊಂದಿರುವ ಸುಮಾರು 3,500 ಜಾಲತಾಣಗಳನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ.

ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ನಡೆಸುತ್ತಿದೆ. ಈ ಹಿಂದಿನ ವಿಚಾರಣೆ ವೇಳೆ, ‘ಇಂತಹ ಅಶ್ಲೀಲ ಚಿತ್ರಗಳು ಇರುವ ಜಾಲತಾಣಗಳನ್ನು  ಶಾಲಾ ಮಕ್ಕಳು ವೀಕ್ಷಿಸುವುದನ್ನು ತಡೆಯುವ ಸಲುವಾಗಿ,  ಶಾಲಾ ಬಸ್‌ಗಳಲ್ಲಿ ಜಾಮರ್‌ಗಳನ್ನು ಅಳವಡಿಸುವ ಬಗ್ಗೆ ನಿಮ್ಮ ನಿಲುವು ತಿಳಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿತ್ತು.

ಪೀಠದ ಎದುರು, ಕೇಂದ್ರ ಸರ್ಕಾರದ ನಿಲುವು ತಿಳಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್‌, ‘ಶಾಲಾ ಬಸ್‌ಗಳಲ್ಲಿ ಜಾಮರ್ ಅಳವಡಿಸುವುದು ಅಸಾಧ್ಯ. ಆದರೆ, ಶಾಲೆಗಳಲ್ಲಿ ಜಾಮರ್ ಅಳವಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಕೇಂದ್ರೀಯ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಗೆ ಸೂಚಿಸಿದ್ದೇವೆ. ಬಾಲ ಲೈಂಗಿಕ ಚಿತ್ರಗಳನ್ನು ನಿಯಂತ್ರಿಸಲು ಸರ್ಕಾರ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)