ಬುಧವಾರ, ಫೆಬ್ರವರಿ 19, 2020
23 °C

ಬಾರದ ಮಳೆ: ಹವಾಮಾನ ಇಲಾಖೆ ವಿರುದ್ಧ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

ಬಾರದ ಮಳೆ: ಹವಾಮಾನ ಇಲಾಖೆ ವಿರುದ್ಧ ದೂರು

ಮುಂಬೈ: ‘ಹವಾಮಾನ ಇಲಾಖೆ ಅಧಿಕಾರಿಗಳು, ಹವಾಮಾನದ ತಪ್ಪು ಮುನ್ಸೂಚನೆ ನೀಡುವ ಮೂಲಕ ನಮಗೆ ನಷ್ಟ ಉಂಟು ಮಾಡಿದ್ದಾರೆ’ ಎಂದು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಹಳ್ಳಿಯೊಂದರ ರೈತರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಹವಾಮಾನ ಇಲಾಖೆಯ ಪುಣೆ ಮತ್ತು ಕೊಲಬಾ ಕೇಂದ್ರಗಳ ಅಧಿಕಾರಿಗಳು, ‘ಜೂನ್‌–ಜುಲೈನಲ್ಲಿ ವಾಡಿಕೆ ಮಳೆಯಾಗುತ್ತದೆ’ ಎಂದು ಮುನ್ಸೂಚನೆ ನೀಡಿದ್ದರು. ಅದನ್ನು ನಂಬಿಕೊಂಡು ಇಲ್ಲಿನ ರೈತರು ಉಳುಮೆ ಕಾರ್ಯ ಮುಗಿಸಿದ್ದಾರೆ. ಬಹುತೇಕರು, ಗೊಬ್ಬರವನ್ನೂ ಹಾಕಿ, ಬಿತ್ತನೆಯನ್ನೂ ಮುಗಿಸಿದ್ದಾರೆ. ಆದರೆ, ಆರಂಭದ ಒಂದೆರಡು ದಿನ ಸಣ್ಣ ಮಳೆ ಬಂದದ್ದು ಬಿಟ್ಟರೆ ಮಳೆಯ ವಾತಾವರಣವೇ ಇಲ್ಲ. ಇಲಾಖೆಯ ಅಧಿಕಾರಿಗಳು ಬೀಜ ಮತ್ತು ಗೊಬ್ಬರ ತಯಾರಕರ ಜತೆ ಕೈಜೋಡಿಸಿ, ನಮ್ಮನ್ನು ವಂಚಿಸಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ರೈತರು ದೂರಿನಲ್ಲಿ ಕೋರಿದ್ದಾರೆ.

ಪೊಲೀಸರು, ‘ದೂರನ್ನು ಪರಿಶೀಲಿಸುತ್ತೇವೆ’ ಎಂದಷ್ಟೇ ಹೇಳಿದ್ದಾರೆ. ಹವಾಮಾನ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)