ಬುಧವಾರ, ಫೆಬ್ರವರಿ 19, 2020
24 °C

ಫುಟ್‌ಬಾಲ್ ಪಂದ್ಯದಲ್ಲಿ ಗದ್ದಲ: ಎಂಟು ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್ ಪಂದ್ಯದಲ್ಲಿ ಗದ್ದಲ: ಎಂಟು ಮಂದಿ ಸಾವು

ಡಕಾರ್‌: ಫುಟ್‌ಬಾಲ್ ಪಂದ್ಯದ ವೇಳೆ ಎರಡೂ ತಂಡಗಳ ಅಭಿಮಾನಿಗಳ ನಡುವೆ ನಡೆದ ಸಂಘರ್ಷದಲ್ಲಿ  ಎಂಟು ಮಂದಿ ಬಲಿಯಾಗಿದ್ದಾರೆ.

ಇಲ್ಲಿ ನಡೆದ ಸೆನೆಗಲ್‌ ಫುಟ್‌ಬಾಲ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಈ ದುರಂತ ಸಂಭವಿಸಿದ್ದು 49 ಮಂದಿ ಗಾಯಗೊಂಡಿದ್ದಾರೆ. ಯು.ಎಸ್‌. ಓಕಮ್‌ ಮತ್ತು ಸ್ಟೇಡ್‌ ಡಿ ಬೋರ್‌ ತಂಡಗಳ ನಡುವೆ ಫೈನಲ್‌ ಪಂದ್ಯ ನಡೆಯುತ್ತಿದ್ದಾಗ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಪಂದ್ಯದಲ್ಲಿ 2–1ರ ಮುನ್ನಡೆ ಸಾಧಿಸಿದ್ದ  ಯು.ಎಸ್.ಓಕಮ್‌ ತಂಡದ ಅಭಿಮಾನಿಗಳು ಎದುರಾಳಿ ತಂಡದ ಬೆಂಬಲಿಗರ ಮೇಲೆ ಕಲ್ಲು ಎಸೆಯಲು ಆರಂಭಿಸಿದ್ದಾರೆ.

ಆಗ ಪ್ರೇಕ್ಷಕರು ಆಸನಗಳನ್ನು ಬಿಟ್ಟು ಓಡಿದ್ದಾರೆ. ಆ ಸಂದರ್ಭದಲ್ಲಿ ಕ್ರೀಡಾಂಗಣದ ಒಂದು ಭಾಗ ಕುಸಿದು ಬಿದ್ದಿತು. ಜನರ ಮೇಲೆ ಗೋಡೆ ಬಿದ್ದ ಕಾರಣ ಅವರು ಸಾವಿಗೀಡಾಗಿದ್ದಾರೆ. ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಗಲಭೆಕೋರರನ್ನು ಚದುರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)