ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನಿಲ್ಲದ ಪ್ಲಾಸ್ಟಿಕ್‌ ವಸ್ತುಗಳ ಬಳಕೆ

Last Updated 17 ಜುಲೈ 2017, 5:24 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಒಂದು ವರ್ಷ ಕಳೆದರೂ ನಗರದಲ್ಲಿ ಅದು ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಪರಿಸರಕ್ಕೆ ಹಾನಿ ಉಂಟು ಮಾಡುವ ಹಲವು ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆಯು 2016ರ ಮಾರ್ಚ್‌ 11ರಂದು ನಿಷೇಧಿಸಿದೆ. ಆದರೆ, ನಗರದಲ್ಲಿ ಹಣ್ಣು, ಹೂವು, ತರಕಾರಿ ಮತ್ತು ದಿನಸಿ ವಸ್ತುಗಳನ್ನು ಕೊಂಡೊಯ್ಯಲು ಜನರು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿರುವುದು ಕಂಡು ಬರುತ್ತಿದೆ.

ಹೋಟೆಲ್‌ಗಳಲ್ಲಿಯೂ ಆಹಾರದ ಪೊಟ್ಟಣಗಳನ್ನು ಕಟ್ಟಿಕೊಡಲು ಮತ್ತು ಪಾರ್ಸಲ್‌ ಕೊಡಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದೆ. ಅಲ್ಲದೆ, ನಗರದ ಬಹುತೇಕ ಅಂಗಡಿಗಳ ಮುಂದೆ ಪ್ಲಾಸ್ಟಿಕ್ ಚೀಲ, ಲೋಟಗಳನ್ನು ಮಾರಾಟಕ್ಕೆ ತೂಗು  ಹಾಕಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸೂಪರ್‌ ಮಾರ್ಕೆಟ್‌ನ ವ್ಯಾಪಾರಿ ಅಮ್ಜದ್ ಖಾನ್, ‘ರಾಜ್ಯ ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಒಳ್ಳೆಯ ಕೆಲಸ. ಆದರೆ, ಪ್ಲಾಸ್ಟಿಕ್‌ ವಸ್ತುಗಳ ಬದಲಿಗೆ ಬಳಸುವ ಪರ್ಯಾಯ ವಸ್ತುಗಳ ವ್ಯವಸ್ಥೆಯನ್ನು ಮಾಡಬೇಕು. ನಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ತಟ್ಟೆಗಳ ಬದಲಿಗೆ ಅಡಿಕೆ ತಟ್ಟೆ, ಪ್ಲಾಸ್ಟಿಕ್ ಲೋಟಗಳ ಬದಲಿಗೆ ಅಡಿಕೆ ಹಾಳೆಯ ದೊನ್ನೆಗಳನ್ನು ಇಟ್ಟಿದ್ದೇವೆ. ಆದರೆ, ಅವುಗಳನ್ನು ಯಾರೂ ಖರೀದಿಸುವುದಿಲ್ಲ. ಈ ಬಗ್ಗೆ ಜನರಿಗೆ ಇನ್ನೂ ತಿಳಿವಳಿಕೆ ಮೂಡಿಲ್ಲ’ ಎಂದರು.

‘ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಹೆಚ್ಚು. ಇವು ಬೇಗ ಕೊಳೆಯುವುದಿಲ್ಲ.  ಪ್ಲಾಸ್ಟಿಕ್ ತ್ಯಾಜ್ಯ ತಗ್ಗು ಪ್ರದೇಶದಲ್ಲಿ ಸಂಗ್ರಹಗೊಳ್ಳುವುದರಿಂದ ಮಳೆನೀರಿನ ಸಹಜ ಹರಿವಿಗೂ ತೊಂದರೆಯಾಗುತ್ತದೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.

ಆರೋಗ್ಯ ನಿರೀಕ್ಷಕರ ತಂಡ ರಚನೆ
ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನಗರದಲ್ಲಿ ಪಾಲಿಕೆ ವತಿಯಿಂದ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ. ಜೂನ್ ತಿಂಗಳಲ್ಲಿ 563 ಕೆ.ಜಿ ಮತ್ತು ಜುಲೈ ಎರಡನೇ ವಾರದವರೆಗೆ 435 ಕೆ.ಜಿ ಪ್ಲಾಸ್ಟಿಕ್ ವಸ್ತುಗಳನ್ನು  ಜಪ್ತಿ ಮಾಡಲಾಗಿದೆ.

ಅಲ್ಲದೇ, ವಾರ್ಡ್‌ವಾರು ದಾಳಿ ನಡೆಸಲು ನೈರ್ಮಲ್ಯ ನಿರೀಕ್ಷಕರ ತಂಡ ರಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಲಬುರ್ಗಿ ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಎಂಜಿನಿಯರ್‌ ಮುನಾಫ್ ಪಟೇಲ್ ಹೇಳಿದರು.

ರೋಗಿಗಳ ಪಡಿಪಾಟಲು
ಪರಿಸರ ರಕ್ಷಣೆ ದೃಷ್ಟಿಯಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಲ್ಲಿಸುವುದು ಉತ್ತಮ. ಇದಕ್ಕೆ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆ, ಪೇಪರ್‌ ಬ್ಯಾಗ್‌ಗಳನ್ನು  ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಪಿಗೆನಗರ ನಿವಾಸಿ ರಮೇಶ್‌ ಅಭಿಪ್ರಾಯಪಟ್ಟರು.

ಪಾಲಿಕೆ ಕೈಗೊಂಡ ಕ್ರಮ
3 ಟನ್ಜ ನವರಿಯಿಂದ ಜಪ್ತಿ ಮಾಡಲಾಗಿರುವ ಪ್ಲಾಸ್ಟಿಕ್‌

ಕಸ ವಿಂಗಡಣೆ ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಬೇಕು

40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ನಿಷೇಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT