ಭಾನುವಾರ, ಡಿಸೆಂಬರ್ 15, 2019
17 °C

ರಾಷ್ಟ್ರಪತಿ ಚುನಾವಣೆ: ಪ್ರಧಾನಿ ಮೋದಿ, ಅಮಿತ್ ಷಾ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಚುನಾವಣೆ: ಪ್ರಧಾನಿ ಮೋದಿ, ಅಮಿತ್ ಷಾ ಮತದಾನ

ನವದೆಹಲಿ: ದೇಶದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ಬೆಳಗ್ಗೆ 10ಗಂಟೆಗೆ ಮತದಾನ ಆರಂಭವಾಗಿದೆ. ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಹಾಗೂ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮೀರಾ ಕುಮಾರ್‌ ಕಣದಲ್ಲಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಕ್ಷಣ ಕ್ಷಣದ ಸುದ್ದಿಬೆಳಗ್ಗೆ 10.53: ಅಸ್ಸಾಂ ಶಾಸಕರು ಸೇರಿದಂತೆ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಮತದಾನ ಮಾಡಿದ್ದಾರೆ

10.48:  ಬಿಜೆಪಿ ಸಂಸದ ಕೇಂದ್ರ ಸಚಿವೆ ಉಮಾ ಭಾರತಿ ಯುಪಿ ವಿಧಾನ್ ಭವನದಲ್ಲಿ ಮತದಾನ ಮಾಡಿದ್ದಾರೆ. ಗೆಲವು ಯಾರು ಸಾಧಿಸುತ್ತಾರೆ ಎಂಬುದು ಸ್ಪಷ್ಟ ಚಿತ್ರಣ ಇದೆ. ಆದರೆ ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ ಎಂಬುದನ್ನು ನೋಡ ಬೇಕಿದೆ- ಉಮಾ  ಭಾರತಿ10.44: ತಮಿಳುನಾಡಿನಲ್ಲಿ  ಡಿಎಂಕೆ ಕಾರ್ಯಕಾರಿ ಅಧ್ಯಕ್ಷ  ಎಂಕೆ ಸ್ಟಾಲಿನ್ ಮತದಾನ

10.41: ಜೈಲಿನಲ್ಲಿದ್ದ ಛಗನ್ ಭುಜಬಲ್ ಮತ್ತು ರಮೇಶ್ ಕದಂ ಅವರನ್ನು ಮತದಾನ ಮಾಡುವುದಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಗೆ ಕೆರೆದುಕೊಂಡು ಬರಲಾಗಿದೆ.

10.30: ನಮ್ಮ ಪಕ್ಷದ 19 ಮಂದಿ ಶಾಸಕರ ಮತ ಮೀರಾ ಕುಮಾರ್ ಅವರಿಗೆ - ಬಿಎಸ್‌ಪಿ ಶಾಸಕ ಲಾಲ್ಜಿ ವರ್ಮಾ

ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ. ಪರಿಶಿಷ್ಟ ಜಾತಿಗೆ ಸೇರಿದವರೊಬ್ಬರು ರಾಷ್ಟ್ರಪತಿಯಾಗಬೇಕು, ಇದು ನಮ್ಮ ಪಕ್ಷ ಮತ್ತು ಚಳುವಳಿಗೆ ಸಿಕ್ಕಿದ ಜಯ- ಬಿಎಸ್‍ಪಿ ಅಧ್ಯಕ್ಷೆ  ಮಾಯಾವತಿ10.20:  ಮಧ್ಯ ಪ್ರದೇಶದ ವಿಧಾನ ಸಭೆಯಲ್ಲಿ ಮತದಾನಕ್ಕಾಗಿ ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದು

10.15:  ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತದಾನ

9.45: ಕರ್ನಾಟಕ ವಿಧಾನಸಭೆಯಲ್ಲಿ ರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆಗೆ ಸಿದ್ದತೆ

ಪ್ರತಿಕ್ರಿಯಿಸಿ (+)