ಶನಿವಾರ, ಡಿಸೆಂಬರ್ 7, 2019
16 °C
ಅಪೊಲೋ ಆಸ್ಪತ್ರೆಯ ಕಾರ್ಯನಿರ್ವಾಹಕ ಮುಖ್ಯಸ್ಥ

ಜಯಲಲಿತಾ ಸಾವಿನ ತನಿಖೆ ಎದುರಿಸಲು ಸಿದ್ಧ: ವೈದ್ಯ ಪ್ರತಾಪ್ ರೆಡ್ಡಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಯಲಲಿತಾ ಸಾವಿನ ತನಿಖೆ ಎದುರಿಸಲು ಸಿದ್ಧ: ವೈದ್ಯ ಪ್ರತಾಪ್ ರೆಡ್ಡಿ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಅಪೊಲೋ ಆಸ್ಪತ್ರೆಯ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ.ಪ್ರತಾಪ್ ರೆಡ್ಡಿ ಹೇಳಿದ್ದಾರೆ.

‘ನಾವು ತನಿಖೆ ಎದುರಿಸಲು ಸಿದ್ಧರಿದ್ದೇವೆ. ಜಯಲಲಿತಾ ಅವರಿಗೆ ನೀಡಿದ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ.  ಇದಕ್ಕಾಗಿ ಯಾರು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

‘ಅಪೊಲೋ ಆಸ್ಪತ್ರೆಯ ವೈದ್ಯರು ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆಯಾಗುವವರೆಗೂ ವಿಶೇಷ ನಿಗಾವಹಿಸಿ ಆರೈಕೆ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅವರಿಗೆ ಹೃದಯಾಘಾತವಾಯಿತು. ನಂತರ ಅವರು ವೈದ್ಯರ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪಿದರು’ ಎಂದು ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.

 ಜಯಲಲಿತಾ ಅವರ ಚಿಕಿತ್ಸೆಗಾಗಿ ಸಿಂಗಪುರದ ತಜ್ಞ ವೈದ್ಯರ ತಂಡವನ್ನೇ ಕರೆಸಲಾಗಿತ್ತು. ಇಬ್ಬರು ಜೊತೆಗೂಡಿಯೇ ಅವರಿಗೆ ಚಿಕಿತ್ಸೆ ನೀಡಿದ್ದೆವು. ನಾವು ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ಪ್ರಮಾದ ಎಸಗಿಲ್ಲ. ಹಾಗಾಗಿ ನಾವು ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)