ಶನಿವಾರ, ಡಿಸೆಂಬರ್ 14, 2019
21 °C

‘ಆಧಾರ್‌’ ಯೋಜನೆಗೆ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

‘ಆಧಾರ್‌’ ಯೋಜನೆಗೆ ಶ್ಲಾಘನೆ

ವಾಷಿಂಗ್ಟನ್: ಆಧಾರ್‌ ಯೋಜನೆ ಮೂಲಕ ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಮಹಿಳೆಯರನ್ನು ತೊಡಗಿಸಿಕೊಂಡು ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಮಹಿಳಾ ವಿಶ್ವ ಬ್ಯಾಂಕಿಂಗ್‌ನ ಅಧ್ಯಕ್ಷೆ ಹಾಗೂ ಸಿಇಒ ಮೇರಿ ಎಲ್ಲೆನ್ ಇಸ್ಕೆಂಡೆರಿಯನ್ ಅವರು ಅಮೆರಿಕ ಸಂಸತ್ತಿಗೆ ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಲಕ್ಷಾಂತರ ಮಹಿಳೆಯರು ಸೂಕ್ತ ದಾಖಲೆ, ಗುರುತಿನ ಪತ್ರ ಇಲ್ಲದೆ ಒಂದು ಬ್ಯಾಂಕ್ ಖಾತೆ ತೆರೆಯಲೂ ಆಗುತ್ತಿಲ್ಲ. ಈ ವೇಳೆ ಭಾರತವು ಕೋಟ್ಯಂತರ ಮಹಿಳೆಯರಿಗೆ ಬಯೊಮೆಟ್ರಿಕ್ ವಿಶಿಷ್ಟ ಗುರುತಿನ ವ್ಯವಸ್ಥೆ ಜಾರಿಗೊಳಿಸಿದ್ದು, ಇದು ಹಣಕಾಸು ಸೇವೆ ವಿಸ್ತರಣೆಗೆ ದಾರಿ ಕಲ್ಪಿಸಿದೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)