ಗುರುವಾರ , ಡಿಸೆಂಬರ್ 12, 2019
17 °C

ಶೀಘ್ರದಲ್ಲೇ ರಾಜ್ಯದ ಬರಪೀಡಿತ ಪ್ರದೇಶಗಳ ಘೋಷಣೆ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೀಘ್ರದಲ್ಲೇ ರಾಜ್ಯದ ಬರಪೀಡಿತ ಪ್ರದೇಶಗಳ ಘೋಷಣೆ: ಸಿಎಂ

ಬೆಂಗಳೂರು: ಮಳೆ ಪರಿಸ್ಥಿತಿ ಅವಲೋಕಿಸಿ ಸಧ್ಯದಲ್ಲಿಯೇ ಬರ ಪೀಡಿತ ಪ್ರದೇಶಗಳ ಹೆಸರು, ವಿವರಗಳನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ರಾಜ್ಯದ 174 ತಾಲ್ಲೂಕುಗಳ ಪೈಕಿ ಕಳೆದ ವರ್ಷ ಮುಂಗಾರು ವೈಫಲ್ಯದಿಂದಾಗಿ 139 ತಾಲ್ಲೂಕುಗಳನ್ನು ಹಾಗೂ ಹಿಂಗಾರು ವೈಫಲ್ಯದಿಂದಾಗಿ 160 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ವರ್ಷ ಜುಲೈ ತಿಂಗಳು ಕೊನೆಯಾಗುತ್ತಾ ಬಂದರೂ ವರುಣ ಕೃಪೆ ತೋರಿಲ್ಲ, ಜಲಾಶಯಗಳಲ್ಲಿ ನೀರಿಲ್ಲ, ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 84 ಟಿಎಂಸಿ ನೀರು ಸಂಗ್ರಹವಾಗಿತ್ತು.

ಈ ಸಲ ಕೇವಲ 40 ಟಿಎಂಸಿ ನೀರು ಸಂಗ್ರಹವಿದೆ. ಆದ್ದರಿಂದ ಪರಿಸ್ಥಿತಿಯನ್ನು ಅವಲೋಕಿಸಿ ಬರಪೀಡಿತ ಪ್ರದೇಶಗಳ ಹೆಸರು, ವಿವರ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರತಿಕ್ರಿಯಿಸಿ (+)