7

ಸಾರಥಿ ರೈಲ್ ಆ್ಯಪ್

Published:
Updated:
ಸಾರಥಿ ರೈಲ್ ಆ್ಯಪ್

ಅಂಧರಿಗಾಗಿ ಮೈಕ್ರೊಸಾಪ್ಟ್ ನೆರವು

ಮೈಕ್ರೊಸಾಫ್ಟ್ ಕಂಪೆನಿಯು ಅಂಧರಿಗಾಗಿ ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಮೂಲಕ ಅಂಧರು ತಮ್ಮ ಸುತ್ತಮುತ್ತಲಿನ ಆಗು-ಹೋಗುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಈ ಆ್ಯಪ್‌ಗೆ ‘ಸೀಯಿಂಗ್ ಐ’ (Seeing AI) ಎಂದು ಹೆಸರಿಡಲಾಗಿದೆ. ಪ್ರಸ್ತುತ ಐಫೋನ್ ಬಳಕೆದಾರರು ಮಾತ್ರ ಈ ಆ್ಯಪ್ ಬಳಕೆ ಮಾಡಬಹುದು. ಆಂಡ್ರಾಯ್ಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆ್ಯಪ್ ಬಳಸಲು ಸಾಧ್ಯವಿಲ್ಲ ಎಂದು ಸೀಯಿಂಗ್ ಐ ಆ್ಯಪ್ ಅಭಿವೃದ್ಧಿಪಡಿಸಿರುವ ತಂತ್ರಜ್ಞರು ಹೇಳುತ್ತಾರೆ. ಬಳಕೆದಾರರು ತಮ್ಮ ಐಫೋನ್‌ಗೆ ವಿಶೇಷ ಸ್ಮಾರ್ಟ್ ಗ್ಲಾಸ್ (ಬ್ರೈಲ್ ಮಾದರಿಯ) ಅಳವಡಿಸಿಕೊಂಡು ಇದನ್ನು ಬಳಸಬಹುದು.

ವಿಡಿಯೊ, ಆಡಿಯೊ ರೆಕಾರ್ಡಿಂಗ್, ಚಿತ್ರ ತೆಗೆಯುವುದು, ಮೇಸೆಜ್ ಓದುವುದು ಸೇರಿದಂತೆ ಸಾಮಾನ್ಯರು ಮಾಡಬಹುದಾದ (ವೀಕ್ಷಣೆ ಮಾಡುವುದನ್ನು ಹೊರತುಪಡಿಸಿ) ಎಲ್ಲ ಕೆಲಸಗಳನ್ನು ಈ ಆ್ಯಪ್ ಮೂಲಕ ಅಂಧರು ಮಾಡಬಹುದಾಗಿದೆ. ಇಲ್ಲಿಯವರೆಗೂ ಅಂಧರು ಮೊಬೈಲ್‌ನಲ್ಲಿ ಮಾತನಾಡುವುದನ್ನು ಮಾತ್ರ ಮಾಡುತ್ತಿದ್ದರು. ಇದೀಗ ಓದುವುದು, ಬರೆಯುವುದು, ಸಂಗೀತ ಆಲಿಸುವುದು, ಗೇಮ್ ಆಡುವುದನ್ನು ಮಾಡಬಹುದು ಎನ್ನುತ್ತಾರೆ ಸಾಫ್ಟ್‌ವೇರ್‌ ತಂತ್ರಜ್ಞರು.

ಸಾಮಾಜಿಕ ಕಳಕಳಿ ದೃಷ್ಟಿಯಿಂದ ಈ ಆ್ಯಪ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಮೈಕ್ರೊಸಾಫ್ಟ್್ ಕಂಪೆನಿ ತಿಳಿಸಿದೆ. ಆಸಕ್ತ ಬಳಕೆದಾರರು ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆ್ಯಪಲ್‌ ಸ್ಟೋರ್‌: ‘Seeing AI’ app

**

ಸಾರಥಿ ರೈಲ್ ಆ್ಯಪ್

ರೈಲ್ವೆ ಇಲಾಖೆಯು ದೇಶದ ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಹಲವಾರು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದೀಗ ರೈಲುಗಳಲ್ಲಿ ಆಹಾರ ಸರಬರಾಜಿಗಾಗಿ ನೂತನ ‘ರೈಲ್ ಸಾರಥಿ’ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ರೈಲುಗಳಲ್ಲಿ ಪ್ರಯಾಣಿಕರು ಆಹಾರ, ನೀರು ತರಿಸಿಕೊಳ್ಳಬೇಕಾದರೆ ಈ ಆ್ಯಪ್ ಅನ್ನು ಬಳಕೆ ಮಾಡಬಹುದು. ಅದಕ್ಕಾಗಿಯೇ ಇದನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಇದರ ಜತೆಗೆ ಟಿಕೆಟ್ ಬುಕ್ಕಿಂಗ್, ಬೋಗಿ ಕ್ಲೀನಿಂಗ್, ವಿಚಾರಣೆ ಸೇರಿದಂತೆ ಪ್ರಯಾಣಿಕರ ಅನುಕೂಲತೆಯ ಹಲವು ವೈಶಿಷ್ಟ್ಯಗಳು ಈ ಆ್ಯಪ್‌ನಲ್ಲಿ ದೊರೆಯುತ್ತವೆ. ಆಂಡ್ರಾಯ್ಡ್‌, ವಿಂಡೋಸ್, ಐಒಎಸ್ ಮಾದರಿಗಳಲ್ಲಿ ಈ ಆ್ಯಪ್ ಲಭ್ಯವಿದ್ದು ಗ್ರಾಹಕರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಹುದು.

ಗೂಗಲ್‌ ಪ್ಲೇಸ್ಟೋರ್‌:  SAARTHI app

**

ರಕ್ತದಲ್ಲಿ ಸಕ್ಕರೆ ಪ್ರಮಾಣ ತಿಳಿಯುವ ಆ್ಯಪ್‌

ಸ್ಮಾರ್ಟ್‌ಫೋನ್‌ ಮೂಲಕ ರಕ್ತದಲ್ಲಿ ಸಕ್ಕರೆ ಪ್ರಮಾಣ ತಿಳಿಯುವ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಬ್ರಿಟನ್ ವಿಜ್ಞಾನಿಗಳು ಪ್ರಕಟಿಸಿದ್ದಾರೆ. ಸದ್ಯ ಈ ಆ್ಯಪ್ ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಪ್ರಾಯೋಗಿಕ ಹಂತದಲ್ಲಿದೆ. ವಿವಿಧ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಈ ಆ್ಯಪ್ ಅನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಪ್ರಸ್ತುತ ಬೆರಳುಗಳಿಗೆ ಸೂಜಿಯನ್ನು ಚುಚ್ಚಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಮಾಪನ ಮಾಡಲಾಗುತ್ತಿದೆ. ಈ ನೂತನ ಆ್ಯಪ್ ಮೂಲಕ ಬಳಕೆದಾರರೊಬ್ಬರು ತಮ್ಮ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮೂಲಕ ಬೆರಳಿನ ಚಿತ್ರ ತೆಗೆದರೆ ಸಾಕು ಈ ಹೊಸ ಆ್ಯಪ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಿಳಿಸಲಿದೆ.

ಇನ್ನು ಮುಂದೆ ಆಸ್ಪತ್ರೆಗೆ ಹೋಗದೇ, ನೋವಿಲ್ಲದಯೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಿಳಿಯಬಹುದು. ಆಂಡ್ರಾಯ್ಡ್‌, ವಿಂಡೋಸ್, ಐಒಎಸ್ ಮಾದರಿಗಳಲ್ಲೂ ಈ ಆ್ಯಪ್ ದೊರೆಯಲಿದೆ. ಈ ಆ್ಯಪ್‌ ಪರೀಕ್ಷೆಗೆ ಹಲವು ಹಂತಗಳನ್ನು ನಿಗದಿಪಡಿಸಲಾಗಿದೆ. ಎಲ್ಲ ಸ್ತರದಲ್ಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಮಾರುಕಟ್ಟೆಗೆ ಬಿಡುಗಡೆ ಬರಲಿದೆ.

**

ಮೀನುಗಾರರ ಪತ್ತೆಗೆ ಸಾರತ್

ಹೈದರಾಬಾದ್‌ನಲ್ಲಿ ಇರುವ ಭಾರತೀಯ ಸಾಗರ ಮಾಹಿತಿ ಕೇಂದ್ರವು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನಾಪತ್ತೆಯಾಗುವ ಮೀನುಗಾರರ ಪತ್ತೆಗಾಗಿ ಸಾರತ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದು ನೀರಿನಲ್ಲೂ ಯಶಸ್ವಿಯಾಗಿ ಕೆಲಸ ಮಾಡಬಲ್ಲದು ಎಂದು ಸಾಗರ ಮಾಹಿತಿ ಕೇಂದ್ರ ತಿಳಿಸಿದೆ.

ಈ ಆ್ಯಪ್ ಮೂಲಕ ನಾಪತ್ತೆಯಾಗಿರುವ ಮೀನುಗಾರರು, ಅವರ ದೋಣಿಗಳನ್ನು ನೌಕಾಪಡೆ ಸೈನಿಕರು, ಕರಾವಳಿ ಪಡೆ ಸೈನಿಕರು, ಗಾರ್ಡ್‌ಗಳು ಈ ಆ್ಯಪ್ ನೆರವಿನಿಂದ ಪತ್ತೆ ಮಾಡಬಹುದು. ನೀರು ಬಿದ್ದರೂ ಕೆಟ್ಟು ಹೋಗದ ಸ್ಮಾರ್ಟ್‌ಪೋನ್‌ ಗಳನ್ನು ಹೊಂದಿರಬೇಕು. ಇದರ ಜತೆಗೆ ಅವರು ಸಾರತ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿರಬೇಕು. ಆಗ ಜಿಪಿಎಸ್ ವ್ಯವಸ್ಥೆ ಮೂಲಕ ನಾಪತ್ತೆಯಾದವರನ್ನು ಪತ್ತೆ ಮಾಡಬಹುದು ಎಂದು ಸಾಗರ ಮಾಹಿತಿ ಸಂಸ್ಥೆ ತಿಳಿಸಿದೆ.

ಗೂಗಲ್‌ ಪ್ಲೇಸ್ಟೋರ್‌: `SARAT’ app

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry