ಸೋಮವಾರ, ಜೂಲೈ 6, 2020
23 °C

20 ವರ್ಷದ ಬಳಿಕ ಪಾಕಿಸ್ತಾನ ಸಂಪುಟದಲ್ಲಿ ಹಿಂದೂ ಸಚಿವ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

20 ವರ್ಷದ ಬಳಿಕ ಪಾಕಿಸ್ತಾನ ಸಂಪುಟದಲ್ಲಿ ಹಿಂದೂ ಸಚಿವ

ಇಸ್ಲಾಮಾಬಾದ್‌: 20 ವರ್ಷಗಳ ಬಳಿಕ ಪಾಕಿಸ್ತಾನ ಸಂಪುಟದಲ್ಲಿ ಹಿಂದೂ ಸಚಿವರಾಗಿ ದರ್ಶನ್‌ ಲಾಲ್‌ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಪಾಕಿಸ್ತಾನದ ನೂತನ ಪ್ರಧಾನಿ ಶಹೀದ್‌ ಖಾಕನ್‌ ಅಬ್ಬಾಸಿ ಅವರು ಶುಕ್ರವಾರ ಹೊಸ ಸಚಿವ ಸಂಪುಟ ರಚಿಸಿದ್ದು, ದರ್ಶನ್‌ ಲಾಲ್‌ ಆಯ್ಕೆಯನ್ನು ಪ್ರಕಟಿಸಿದ್ದಾರೆ.

ದರ್ಶನ್‌ ಲಾಲ್‌ ಅವರಿಗೆ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳ ಸಮನ್ವಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಇದೇ ವೇಳೆ 28 ಮಂದಿ ಸಂಪುಟ ದರ್ಜೆಯ ಸಚಿವರಾಗಿ ಮತ್ತು 19 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮುಖವಾಗಿ ಖವಾಜಾ ಅಸೀಫ್‌ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿದೆ. ಅಸೀಫ್‌ ಅವರು ನವಾಜ್‌ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು.

ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಶಹಬಾಜ್‌ ಷರೀಫ್‌ ಅವರ ಜತೆ ಸತತ ಆರು ಗಂಟೆ ಕಾಲ ಸಮಾಲೋಚನೆ ನಡೆಸಿದ ಬಳಿಕ ಅಬ್ಬಾಸಿ ಅವರು ಖಾತೆಗಳನ್ನು ಹಂಚಿಕೆ ಮಾಡಿದರು. 2013ರಿಂದ ವಿದೇಶಾಂಗ ಖಾತೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿರಲಿಲ್ಲ.

ಹೊಸ ಸಂಪುಟದಲ್ಲಿ ಬಹುತೇಕ ಹಳಬರನ್ನೇ ಮುಂದುವರಿಸಲಾಗಿದೆ. ಕೆಲವರನ್ನು ಮಾತ್ರ ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

65 ವರ್ಷದ ದರ್ಶನ್‌ ಲಾಲ್‌ ಮೀರಾಪುರದ ಮಿಥೆಲೊ ನಗರದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 2013ರ ಚುನಾವಣೆಯಲ್ಲಿ ಎರಡನೇ ಬಾರಿಗೆ ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್‌ ಪಡೆದು ಕಣಕ್ಕಿಳಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.