ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದರಬೇಡಿ, ಪ್ರೀತಿಯಿಂದ ಹೇಳಿಕೊಡಿ ಎಂದು ಅಳುತ್ತಾ ಅಂಕಿ ಕಲಿಯುವ ಮಗುವಿನ ವಿಡಿಯೊ ವೈರಲ್

Last Updated 19 ಆಗಸ್ಟ್ 2017, 13:13 IST
ಅಕ್ಷರ ಗಾತ್ರ

ನವದೆಹಲಿ: ಅಳುತ್ತಾ ಒನ್, ಟು, ತ್ರೀ ಎಂದು ಹೇಳುತ್ತಿರುವ ಪುಟ್ಟ ಹೆಣ್ಣು ಮಗು. ಮತ್ತೊಮ್ಮೆ ಓದು, ಸರಿಯಾಗಿ ಹೇಳು ಎಂದು ಗದರುತ್ತಿರುವ ಅಮ್ಮನ ದನಿ. ಇಷ್ಟೊಂದು ಗದರಬೇಡಿ, ಪ್ರೀತಿಯಿಂದ ಹೇಳಿಕೊಡಿ ಎಂದು ಆ ಮಗು ಪರಿ ಪರಿಯಾಗಿ ಬೇಡಿಕೊಂಡರೂ ಮಾತ್ರ ಏರು ದನಿಯಲ್ಲಿ ಬೈಯುತ್ತಾ ಮಗುವಿನಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಮಗು ಅಳುತ್ತಾ, ಅಂಜುತ್ತಾ ಅಂಕಿ ಕಲಿಯುವುದನ್ನು ನೋಡಿದರೆ ಎಂಥವರ ಕಣ್ಣಲ್ಲಿಯೂ ನೀರು ಬಂದುಬಿಡುತ್ತದೆ. ಆ ಪುಟ್ಟ ಪಾಪು ಮೇಲೆ ಕೂಗಾಡುತ್ತಿರುವ ಆ ಹೆಣ್ಣು ದನಿ ಮೇಲೆ ಸಿಟ್ಟು ಕೂಡಾ!

ಶಿಕ್ಷಣದ ನೆಪದಲ್ಲಿ ಈ ರೀತಿಯ ಶಿಕ್ಷೆಯೇ? ಎಂಬ ಶೀರ್ಷಿಕೆಯಲ್ಲಿ ಹೀಗೊಂದು ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ, ಮಕ್ಕಳಿಗೆ ಈ ರೀತಿ ಶಿಕ್ಷೆ ಕೊಟ್ಟು ಕಲಿಸುವುದು ಯಾಕೆ? ಎಂದು ಹಲವಾರು ನೆಟಿಜನ್‌ಗಳು ಸಾಮಾಜಿಕ ತಾಣದಲ್ಲಿ ಪ್ರಶ್ನಿಸಿದ್ದಾರೆ.

ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೊ ಬಗ್ಗೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT