7

ನಕಲಿ ಸಮಾಜವಾದಿಗಳ ಬಗ್ಗೆ ಎಚ್ಚರ: ಕಾರ್ಯಕರ್ತರಿಗೆ ಅಖಿಲೇಶ್‌ ಯಾದವ್‌ ಕರೆ

Published:
Updated:
ನಕಲಿ ಸಮಾಜವಾದಿಗಳ ಬಗ್ಗೆ ಎಚ್ಚರ: ಕಾರ್ಯಕರ್ತರಿಗೆ ಅಖಿಲೇಶ್‌ ಯಾದವ್‌ ಕರೆ

ಲಖನೌ: ನಕಲಿ ಸಮಾಜವಾದಿಗಳ ವಿಚಾರದಲ್ಲಿ ಎಚ್ಚರದಿಂದ ಇರಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪಕ್ಷದ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಸಚಿವ ಕೇಶವ್‌ ಪ್ರಸಾದ್‌ ಮೌರ್ಯ ಅವರಿಂದ ತೆರವಾಗಿರುವ ಗೋರಖ್‌ಪುರ ಹಾಗೂ ಫುಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದು ತಿಳಿಸಿದ್ದಾರೆ.

‘ನಕಲಿ ಸಮಾಜವಾದಿಗಳ ಬಗ್ಗೆ ಎಚ್ಚರದಿಂದಿರಿ. ಅವರು ಹಲವು ಸಂದರ್ಭಗಳಲ್ಲಿ ಸಮಾಜವಾದಿ ಕಾರ್ಯಕ‌್ರಮಗಳಿಗೆ ಅಡ್ಡಿ ಉಂಟುಮಾಡಿದ್ದಾರೆ. ಸದ್ಯ ನಮ್ಮ ಪಕ್ಷ ಅಧಿಕಾರಕ್ಕೇರದಂತೆ ಮಾಡುವಲ್ಲಿಯೂ ಅವರು ಸಫಲರಾಗಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ಸುಮಾರು 15 ಸಾವಿರ ಕಾರ್ಯಕರ್ತರು ಸೇರಿದ್ದ ಸಮಾವೇಶದಲ್ಲಿ, ನರೇಶ್‌ ಉತ್ತಮ್‌ ಅವರನ್ನು ಪಕ್ಷದ ರಾಜ್ಯಘಟಕದ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಯಿತು. ಈ ವೇಳೆ ಹಿರಿಯ ನಾಯಕ ರಾಮ್‌ಗೋಪಾಲ್‌ ಯಾದವ್‌, ಅಜಂ ಖಾನ್‌, ರಾಮ್‌ ಗೋವಿಂದ್‌ ಚೌಧುರಿ ಅವರು ಉಪಸ‌್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry