30ಕ್ಕೆ ಮಂಗಳೂರು ದಸರಾ ಮೆರವಣಿಗೆ: ನಿರ್ವಹಣೆಗೆ ಸಮಿತಿ

7

30ಕ್ಕೆ ಮಂಗಳೂರು ದಸರಾ ಮೆರವಣಿಗೆ: ನಿರ್ವಹಣೆಗೆ ಸಮಿತಿ

Published:
Updated:
30ಕ್ಕೆ ಮಂಗಳೂರು ದಸರಾ ಮೆರವಣಿಗೆ: ನಿರ್ವಹಣೆಗೆ ಸಮಿತಿ

ಮಂಗಳೂರು: ಮಂಗಳೂರು ದಸರಾ ಮೆರವಣಿಗೆ ಇದೇ 30ರಂದು ಸಂಜೆ 4 ಗಂಟೆಯಿಂದ ನಡೆಯಲಿದ್ದು, ವ್ಯವಸ್ಥೆಯ ದೃಷ್ಟಿಯಿಂದ ತಲಾ 10 ಮಂದಿಯ 25ಕ್ಕೂ ಹೆಚ್ಚು ಮೆರವಣಿಗೆ ಸಮಿತಿಗಳನ್ನು ರಚಿಸಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಹೇಳಿದರು.

ದೇವಳದ ಜಯ.ಸಿ. ಸುವರ್ಣ ಮಂಟಪದಲ್ಲಿ ದಸರಾ ಮೆರವಣಿಗೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ ಮಂಗಳೂರು ದಸರಾ ಶೋಭಾ

ಯಾತ್ರೆ ಸಂಜೆ 4ಗಂಟೆಗೆ ಹೊರಡಲಿದ್ದು, ಈ ಬಾರಿಯೂ ಮಂಗಳೂರು ದಸರಾಕ್ಕೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆಯಿದೆ. ಸುಮಾರು 75ಕ್ಕೂ ಅಧಿಕ ಸ್ತಬ್ಧಚಿತ್ರ ತಂಡ, ವೇಷಧಾರಿ ತಂಡ, ಬ್ಯಾಂಡ್ ಸೇರಿದಂತೆ ನಾನಾ ತಂಡಗಳು ಭಾಗವಹಿಸಲಿದೆ.

’ಮೆರವಣಿಗೆ ಹೊರಟ ಬಳಿಕ ಯಾವುದೇ ಅಡಚಣೆಯಿಲ್ಲದೆ ಸಾಂಗವಾಗಿ ಸಾಗಲು ಅನುಕೂಲವಾಗುವಂತೆ ಈ ಬಾರಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕ್ಷೇತ್ರದಿಂದಲೇ ತಲಾ 10ಮಂದಿಯ 20ಕ್ಕೂ ಅಧಿಕ ಮೆರವಣಿಗೆ ನಿರ್ವಹಣಾ ಸಮಿತಿ ರಚಿಸಲಾಗುವುದು’ ಎಂದರು.

ದಸರಾ ಮಹೋತ್ಸವ ಮೆರ ವಣಿಗೆ ಯಲ್ಲಿ ಭಾಗವಹಿಸುವ ಎಲ್ಲ ಸ್ತಬ್ಧಚಿತ್ರ, ವೇಷಧಾರಿಗಳ ಸಂಘ ಟಕರ ಸಭೆ ಸೆ.26ರಂದು ಬೆಳಿಗ್ಗೆ 10.30ಗಂಟೆಗೆ ಶ್ರೀ ಕ್ಷೇತ್ರದ ಜಯ ಸಿ. ಸುವರ್ಣ ಸಭಾ ವೇದಿಕೆಯಲ್ಲಿ ನಡೆಯಲಿದೆ. ದೇವಳದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಪದ್ಮರಾಜ್‌, ಹರಿಕೃಷ್ಣ ಬಂಟ್ವಾಳ್‌ ಮತ್ತು ಬಿ. ಮಾಧವ ಸುವರ್ಣ, ರವಿಶಂಕರ್ ಮಿಜಾರು, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಡಾ.ಬಿ.ಜಿ. ಸುವರ್ಣ, ಎಂ. ಶೇಖರ್ ಪೂಜಾರಿ, ರಮಾನಾಥ್ ಕಾರಂದೂರು ಜತಿನ್ ಅತ್ತಾವರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್, ಡಾ.ಅನಸೂಯ ಬಿ.ಟಿ. ಸಾಲಿಯಾನ್, ದೀಪಕ್ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry