ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲದಲ್ಲಿ ಹಕ್ಕಿಗಳ ಚಿಲಿಪಿಲಿ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಕ್ಕಿಗಳ ಬಗ್ಗೆ ಮಾಹಿತಿಯನ್ನು ಕನ್ನಡದಲ್ಲಿ ನೀಡಬೇಕೆಂಬ ಆಸೆಯಿಂದ ಹಕ್ಕಿಪುಕ್ಕ ಡಾಟ್ ಕಾಂ (hakkipukka.com) ರೂಪಿಸಿದ್ದಾರೆ ಯುವಕರಾದ ಎಲ್.ಎಂ.ದೀಪಕ್ ಮತ್ತು ಪತ್ರಕರ್ತ ಮಹೇಶ್ ಮಲ್ನಾಡ್.

ಈ ವೆಬ್‍ಸೈಟ್ ನಿರ್ಮಿಸಲು ಪೂರ್ಣಚಂದ್ರ ತೇಜಸ್ವಿ ಅವರೇ ಪ್ರೇರಣೆಯಂತೆ ಈ ಯುವಕರಿಗೆ.

ಎರಡು ವರ್ಷಗಳಿಂದ ಸಕ್ರಿಯವಾಗಿರುವ ಈ ವೆಬ್‍ಸೈಟ್‍ನಲ್ಲಿ 400ಕ್ಕೂ ಹೆಚ್ಚು ಹಕ್ಕಿಗಳ ಬಗ್ಗೆ ಕನ್ನಡದಲ್ಲಿ ಲಭ್ಯ. ಹಕ್ಕಿಗಳನ್ನು ಪ್ರಭೇದ, ಕುಟುಂಬ, ವರ್ಗದ ಆಧಾರದ ಮೇಲೆ ವಿಂಗಡಿಸಲಾಗಿದೆ. ಹಕ್ಕಿಗಳ ಇತರೆ ಹೆಸರುಗಳು, ವೈಜ್ಞಾನಿಕ ಹೆಸರು, ಜೀವನ ವಿಧಾನದ ಸಂಕ್ಷಿಪ್ತ ಮಾಹಿತಿ, ದೇಹ ರಚನೆ ವೈಶಿಷ್ಟ, ಆಹಾರ ಕ್ರಮ, ವಾಸಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ರಾಜ್ಯದ ಹೆಸರಾಂತ ಛಾಯಾಗ್ರಾಹಕರು ತೆಗೆದಿರುವ ಚಿತ್ರಗಳನ್ನೇ ವೆಬ್‍ಸೈಟ್‍ನಲ್ಲಿ ಬಳಸಲಾಗಿದೆ. ಬಹುತೇಕ ಚಿತ್ರಗಳನ್ನು ಕ್ಲೆಮೆಂಟ್.ಎಂ.ಪ್ರಾನ್ಸಿಸ್ ಅವರು ತೆಗೆದಿದ್ದಾರೆ. ಬಿ.ಶ್ರೀನಿವಾಸ್, ಎ.ಕೆ.ರಾಜು, ಡಿ.ಜಿ.ಮಲ್ಲಿಕಾರ್ಜುನ, ಕಿರಣ್ ಪೂಣಚ್ಚಾ, ಬಿ.ಪ್ರವೀಣ್ ಮತ್ತು ವೆಬ್‍ಸೈಟ್ ನಿರ್ಮಿಸಿದವರೊಲ್ಲಬ್ಬರಾದ ದೀಪಕ್ ಅವರು ತೆಗೆದಿರುವ ಚಿತ್ರಗಳೂ ಇದರಲ್ಲಿವೆ.

ವೆಬ್‍ಸೈಟ್ ಹಕ್ಕಿಗಳ ಮಾಹಿತಿ ಜೊತೆಗೆ ಅವುಗಳ ಕುತೂಹಲಕಾರಿ ಜೀವನ ಪದ್ಧತಿಯ ಬಗ್ಗೆ ತಿಳಿಸಲೆಂದೇ ’ನಿಮಗಿದು ಗೊತ್ತೆ?’ ಆಯ್ಕೆ ನೀಡಲಾಗಿದೆ.

ಹಕ್ಕಿಗಳ ಧ್ವನಿಗಳನ್ನೂ ವೆಬ್‍ಸೈಟ್‍ಗೆ ಸೇರಿಸುವ ತಯಾರಿ ನಡೆದಿದೆ. ಈಗಾಗಲೇ 200ಕ್ಕೂ ಹೆಚ್ಚು ಹಕ್ಕಿಗಳ ಧ್ವನಿಯನ್ನು ಸಂಗ್ರಹಿಸಲಾಗಿದೆ.

ಆಸಕ್ತರು ಹಕ್ಕಿಗಳ ಚಿತ್ರಗಳನ್ನು ಮತ್ತು ಮಾಹಿತಿ ಕಳುಹಿಸಲು ವೆಬ್‍ಸೈಟ್‍ನಲ್ಲಿಯೇ ಅವಕಾಶ ಕಲ್ಪಿಸಲಾಗಿದೆ.

ಚಿತ್ರಗಳನ್ನು peck@hakkipukka.com ಗೆ ಮೇಲ್ ಮಾಡಬಹುದು. ಹಕ್ಕಿಪುಕ್ಕ ಫೇಸ್‍ಬುಕ್ ಪುಟ facebook.com/hakkipukka

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT