ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದ ದುರ್ಗಂಧಕ್ಕೆ ಮನೆಮದ್ದು

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೆಲವರಿಗೆ ಅತಿಬೆವರು. ಇನ್ನೂ ಕೆಲವರಿಗೆ ದೇಹ ದುರ್ಗಂಧದ ಸಮಸ್ಯೆ. ಇಂಥ ಸಮಸ್ಯೆಗಳಿಂದ ಮುಕ್ತರಾಗಲು ಈ ಮನೆಮದ್ದುಗಳನ್ನು ಬಳಸಿ ನೋಡಿ. ಅದಕ್ಕೂ ಮೊದಲು ನಿಮ್ಮ ಚರ್ಮಕ್ಕೆ ಯಾವುದಾದರೂ ಅಲರ್ಜಿ ಇದೆಯೇ ಎಂಬ ಎಚ್ಚರಿಕೆಯೂ ಇರಲಿ.

*ನಿಂಬೆರಸ: ಹತ್ತಿಯ ಸಹಾಯದಿಂದ ನಿಂಬೆರಸವನ್ನು ದೇಹದ ಮೇಲೆ ಹಚ್ಚಿ. 10 ನಿಮಿಷದ ನಂತರ ಸ್ನಾನ ಮಾಡಿ.

*ಕರ್ಪೂರದ ಎಣ್ಣೆ: ಸ್ನಾನದ ನೀರಿನಲ್ಲಿ ಒಂದು ಚಮಚ ಕರ್ಪೂರದ ಎಣ್ಣೆ ಮಿಕ್ಸ್‌ ಮಾಡಿದರೆ, ದುರ್ವಾಸನೆ ಮತ್ತು ಸೂಕ್ಷ್ಮಜೀವಿಗಳ ತೊಂದರೆಯಿಂದ ಮುಕ್ತಿ ಸಿಗುತ್ತದೆ.

*ಬೇಕಿಂಗ್‌ ಸೋಡಾ: ಒಂದು ಚಮಚ ಬೇಕಿಂಗ್‌ ಸೋಡಾ ಮತ್ತು ಒಂದು ಚಮಚ ನಿಂಬೆರಸ ಬೆರೆಸಿಟ್ಟುಕೊಳ್ಳಿ. ಇದನ್ನು ದೇಹದ ಮೇಲೆ ಹಚ್ಚಿ. 5 ನಿಮಿಷದ ನಂತರ ತೊಳೆದುಕೊಳ್ಳಿ.

*ಗೋಧಿಹುಲ್ಲು: ಪ್ರತಿದಿನ 2 ಚಮಚ ಗೋಧಿಹುಲ್ಲಿನ ರಸ ಸೇವನೆಯು ದೇಹದ ದುರ್ಗಂಧವನ್ನು ಕಡಿಮೆ ಮಾಡುತ್ತದೆ.

*ಫಿಟ್‌ಕರಿ: ಸ್ನಾನ ಮಾಡುವ ನೀರಿಗೆ ಸ್ವಲ್ಪ ಫಿಟ್‌ಕರಿ ಸೇರಿಸಿ.

*ಆ್ಯಪಲ್‌ ಸೈಡರ್‌ ವಿನೆಗರ್‌: ಹತ್ತಿಯ ಸಹಾಯದಿಂದ ಆ್ಯಪಲ್‌ ಸೈಡರ್‌ ವಿನೆಗರ್‌ ದ್ರಾವಣವನ್ನು ಕಂಕುಳಿಗೆ ಹಚ್ಚಿಕೊಳ್ಳಿ. 10 ನಿಮಿಷದ ನಂತರ ಸ್ನಾನ ಮಾಡಿ.

* ಟೊಮೆಟೊ ರಸ: ಸ್ನಾನ ಮಾಡುವ ನೀರಿಗೆ ಕೊಂಚ ಟೊಮೆಟೊ ರಸ ಬೆರೆಸಿ.

*ಶ್ರೀಗಂಧ: ತೇಯ್ದ ಅಥವಾ ಪುಡಿಗೆ ನೀರು ಬೆರೆಸಿ ಪೇಸ್ಟ್‌ನಂತೆ ಮಾಡಿಕೊಂಡ ಶ್ರೀಗಂಧವನ್ನು ಕಂಕುಳಿಗೆ ಹಚ್ಚಿಕೊಳ್ಳಿ. 10 ನಿಮಿಷದ ನಂತರ ಸ್ನಾನ ಮಾಡಿ.

*ಮಸೂರ್‌ ದಾಲ್‌: ಒಂದು ಚಮಚ ಮಸೂರ್‌ ದಾಲ್‌ ಪುಡಿಗೆ ಮೂರು ಚಮಚ ನಿಂಬೆರಸ ಬೆರೆಸಿ ಪೇಸ್ಟ್‌ನಂತೆ ಮಾಡಿಕೊಳ್ಳಿ. ದೇಹದ ಮೇಲೆ ಸವರಿಕೊಂಡು 10 ನಿಮಿಷದ ನಂತರ ಸ್ನಾನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT