ಗ್ರಾಹಕರ ವೇದಿಕೆ ಆದೇಶ ಪಾಲಿಸದವರಿಗೆ ಶಿಕ್ಷೆ

ಶುಕ್ರವಾರ, ಜೂನ್ 21, 2019
22 °C

ಗ್ರಾಹಕರ ವೇದಿಕೆ ಆದೇಶ ಪಾಲಿಸದವರಿಗೆ ಶಿಕ್ಷೆ

Published:
Updated:

ಜಮಖಂಡಿ: ಗ್ರಾಹಕರ ವೇದಿಕೆಯ ಆದೇಶ ಪಾಲಿಸದ ತಾಲ್ಲೂಕಿನ ಹೊಸೂರ ಗ್ರಾಮದ ವಿಜಯಲಕ್ಷ್ಮಿ ಅರ್ಬನ್‌ ಕೋ–ಆಪ್‌ ಸೊಸೈಟಿ ನಿಯಮಿತದ ಕಾರ್ಯದರ್ಶಿ ಹಾಗೂ ಚೇರಮನ್‌ ಅವರಿಗೆ 6 ತಿಂಗಳು ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ ಎಂದು ವಕೀಲ ವಿ.ಬಿ. ತಿರಕಪಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೊಸೈಟಿ ಕಾರ್ಯದರ್ಶಿ ಹನಮಂತ ಹಳ್ಳೂರ ಹಾಗೂ ಚೇರಮನ್‌ ಗಿರಿಮಲ್ಲಪ್ಪ ಬಾಗೇವಾಡಿ ಶಿಕ್ಷೆ ಮತ್ತು ದಂಡಕ್ಕೆ ಗುರಿಯಾದವರು. ತಮ್ಮ ಕಕ್ಷಿದಾರರಾದ ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿಗಳಾದ ಸತ್ಯೆಪ್ಪ ಬಡೆಪ್ಪಗೋಳ ಹಾಗೂ ಆತನ ಪತ್ನಿ ಲಕ್ಷ್ಮಿ ಬಡೆಪ್ಪಗೋಳ ಪರವಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆ 1986 ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ ಎಂದರು.

ತಮ್ಮ ಕಕ್ಷಿದಾರರು ಸೊಸೈಟಿನಲ್ಲಿ 2010 ರಲ್ಲಿ ₨3 ಲಕ್ಷ ಹಣ ಠೇವಣಿ ಇಟ್ಟಿದ್ದರು. ಇಟ್ಟ ಠೇವಣಿ ಹಾಗೂ ಅದರ ಮೇಲಿನ ಬಡ್ಡಿ ಹಣವನ್ನು ಪಾವತಿಸುವಂತೆ ಹಲವಾರು ಬಾರಿ ಕೋರಿದ್ದರು. ಆದರೆ, ಸೊಸೈಟಿಯಿಂದ ಯಾವುದೇ ಸ್ಪಂದನೆ ಇರಲಿಲ್ಲ.

ಆದ್ದರಿಂದ ಹಣ ಪಾವತಿಸುವಂತೆ ಆದೇಶ ನೀಡಲು ಕೋರಿ ಗ್ರಾಹಕರ ವೇದಿಕೆಗೆ 2013 ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿ ಠೇವಣಿ ಹಣದ ಮೇಲೆ ಕಕ್ಷಿದಾರರು ಪಡೆದ ಸಾಲ ಮತ್ತು ಬಡ್ಡಿ ಹಣ ಮುರಿದುಕೊಂಡು ಉಳಿದ ಹಣವನ್ನು ಪಾವತಿಸುವಂತೆ 2014 ರ ಮೇ 24 ರಂದು ಗ್ರಾಹಕರ ವೇದಿಕೆ ತೀರ್ಪು ನೀಡಿತ್ತು.

ಆದರೆ, ಗ್ರಾಹಕರ ವೇದಿಕೆ ನೀಡಿದ್ದ ತೀರ್ಪನ್ನು ಸೊಸೈಟಿ ಪಾಲಿಸಿರಲಿಲ್ಲ. ವೇದಿಕೆಯ ತೀರ್ಪನ್ನು ಪಾಲಿಸುವಂತೆ ಕೋರಿ ಮತ್ತೆ 2014 ರಲ್ಲಿ ಮರು ಅರ್ಜಿ ಸಲ್ಲಿಸಲಾಗಿತ್ತು. ಮರು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವೇದಿಕೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry