ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚ ಮುಕ್ತ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆ

ಕಪ್ಪೆಕೇರಿಯಲ್ಲಿ ಗಬ್ಬು ವಾಸನೆ, ಶೌಚಾಲಯ ಬಳಕೆಗೆ ಹಿಂದೇಟು
Last Updated 3 ಅಕ್ಟೋಬರ್ 2017, 6:18 IST
ಅಕ್ಷರ ಗಾತ್ರ

ಔರಾದ್: ಗಾಂಧಿ ಜಯಂತಿ ದಿನದಂದು (ಸೋಮವಾರ) ಬಯಲು ಶೌಚ ಮುಕ್ತ ಗ್ರಾಮವಾಗಿ ಘೋಷಣೆಗೆ ಸಿದ್ಧವಾದ ಕಪ್ಪೆಕೇರಿಯಲ್ಲಿ ನೈರ್ಮಲ್ಯ ಸಮಸ್ಯೆ ಉಲ್ಬಣಿಸಿ ಜನರಲ್ಲಿ ಅನಾರೋಗ್ಯದ ಭೀತಿ ಎದುರಾಗಿದೆ.

ಸಂತಪುರ ಗ್ರಾಮ ಪಂಚಾಯಿತಿ ದಾಖಲೆ ಪ್ರಕಾರ, ಇಲ್ಲಿಯ ಎಲ್ಲ 117 ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿವೆ. ಬಹುತೇಕ ಎಲ್ಲರೂ ಬಯಲು ಶೌಚಾಲಯ ತೊರೆದು ಮನೆಯ ಶೌಚಾಲಯ ಬಳಸುತ್ತಿದ್ದಾರ.

ಆದರೆ ಇಲ್ಲಿನ ಗ್ರಾಮಸ್ಥರು ಹೇಳುವುದೇ ಬೇರೆ. 60 ರಿಂದ 70 ಮನೆಗಳಲ್ಲಿ ಶೌಚಾಲಯ ನಿರ್ಮಾಣ ಆಗಿದೆ. ಆದರೆ ಅವು ಬಳಸಲು ಯೋಗ್ಯ ಅಲ್ಲ. ಬಳಸಿದರೆ ಮನೆಯಲ್ಲಿ ಗಬ್ಬು ವಾಸನೆ ನಾರುತ್ತಿದೆ.

‘ಈ ಕಾರಣ ಕೆಲ ಮನೆಗಳಲ್ಲಿ ಮಹಿಳೆಯರು ಬಳಸುವುದು ಬಿಟ್ಟರೆ ಯಾರೂ ಶೌಚಾಲಯ ಬಳಸುತ್ತಿಲ್ಲ’ ಎಂದು ಗ್ರಾಮದ ಶೇಷಾರಾವ ಲದ್ದೆ, ವೈಜಿನಾಥ ಗಾಡೆ ಹೇಳುತ್ತಾರೆ.

‘3 ರಿಂದ 4 ಅಡಿ ಆಳದ ಗುಂಡಿ ತೋಡಿ ಶೌಚಾಲಯ ಮಾಡಿದರೆ ಅದು ಹೇಗೆ ಅನುಕೂಲವಾಗುತ್ತದೆ? ಕಟ್ಟಿದ ಎರಡು–ಮೂರ ದಿನದಲ್ಲಿ ಮಳೆ ಮತ್ತು ಚರಂಡಿ ನೀರು ಗುಂಡಿಯಲ್ಲಿ ತುಂಬಿ ಗಬ್ಬು ನಾರುತ್ತಿದೆ. ಸ್ವಚ್ಛ ಭಾರತ ಹೆಸರಿನಲ್ಲಿ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ ಹೊರತು ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರಕ್ಕೆ ಜನರಿಗೆ ಶೌಚಾಲಯ ಕಟ್ಟಿಕೊಡಬೇಕು ಎಂಬ ಮನಸ್ಸಿದ್ದರೆ ₹ 50 ರಿಂದ 60 ಸಾವಿರ ಖರ್ಚು ಮಾಡಿ ಗುಣಮಟ್ಟದ ಕೆಲಸ ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ತಾವು ಕೆಲಸ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಕೆಲ ಅಧಿಕಾರಿಗಳು ಗಾಂಧಿ ಗ್ರಾಮ, ಬಯಲು ಶೌಚ ಮುಕ್ತ ಗ್ರಾಮ ಘೋಷಣೆ ಮಾರ್ಗ ಹಿಡಿದಿದ್ದಾರೆ’ ಎಂದು ಕೆಲ ಗ್ರಾಮಸ್ಥರು ಆರೋಪಿಸುತ್ತಾರೆ.

‘ಊರಿಗೆ ಭೇಟಿ ನೀಡಿದರೆ ವಾಸ್ತವಾಂಶ ಬಯಲಿಗೆ ಬರುತ್ತದೆ. ಇವತ್ತಿಗೂ ನಮ್ಮ ಊರಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಒಂದೂ ಗಲ್ಲಿಯಲ್ಲಿ ಸರಿಯಾದ ರಸ್ತೆಗಳಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ‘ ಎಂದು ಅವರು ಹೇಳುತ್ತಾರೆ.

‘ಶಿಥಿಲಗೊಂಡ ಶಾಲೆ ಕಟ್ಟಡದಲ್ಲಿ ಮಕ್ಕಳು ಪಾಠ ಕಲಿಯುತ್ತಾರೆ. ಇಂತಹ ಹತ್ತಾರು ಸಮಸ್ಯೆಗಳ ನಡುವೆ ನಮ್ಮ ಊರು ಬಯಲು ಶೌಚ ಮುಕ್ತ ಗ್ರಾಮವಾಗಿ ಘೋಷಣೆಯಾದರೆ ನಮಗೆ ಸಂತೋಷವಾಗುತ್ತದೆಯೇ’ ಎಂದು ಗ್ರಾಮದ ಮಹಾದೇವ ಸ್ವಾಮಿ ಮತ್ತು ಪರಮೇಶ್ವರ ಪ್ರಶ್ನಿಸುತ್ತಾರೆ.
***
ಕಪ್ಪೆಕೇರಿ ಸೇರಿದಂತೆ 11 ಗ್ರಾಮಗಳು ಬಯಲು ಶೌಚ ಮುಕ್ತ ಗ್ರಾಮವಾಗಿ ಘೋಷಣೆ ಆಗಬೇಕಿದೆ. ಜನರು ಶೌಚಾಲಯ ಬಳಸಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಮೂರು ತಂಡ ರಚಿಸಲಾಗಿದೆ.
-ಜಗನ್ನಾಥ ಮೂರ್ತಿ, ಇಒ ತಾಪಂ. ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT