ಸೋಮವಾರ, ಸೆಪ್ಟೆಂಬರ್ 16, 2019
29 °C

ಟ್ರೋಲ್ ಆದ ರಣವೀರ್ ಸಿಂಗ್ ಅಲ್ಲಾವುದ್ದೀನ್ ಲುಕ್

Published:
Updated:
ಟ್ರೋಲ್ ಆದ ರಣವೀರ್ ಸಿಂಗ್ ಅಲ್ಲಾವುದ್ದೀನ್ ಲುಕ್

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’  ಚಿತ್ರ ದಿನೇ ದಿನೇ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿದೆ. 

ಇತ್ತೀಚೆಗೆ ರಣವೀರ್ ಸಿಂಗ್ ಚಿತ್ರದಲ್ಲಿನ ತಮ್ಮ ಪಾತ್ರವಾದ  ಅಲ್ಲಾವುದ್ದೀನ್ ಖಿಲ್ಜಿಯ ವೇಷದಲ್ಲಿನ ಫೋಟೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಾರಿಯ ರಣವೀರ್ ಸಿಂಗ್ ಲುಕ್ ಕೇಜ್ರಿವಾಲ್‌, ಇಶಾಂತ್‌ ಶರ್ಮಾರಿಂದ ಹಿಡಿದು ಗೇಮ್ಸ್ ಆಫ್ ಥ್ರೋನ್ಸ್‌ನ ಕಾಲ್ ಡ್ರೋಗೊವರೆಗೆ ವಿವಿಧ ರೀತಿಯಲ್ಲಿ ಟ್ರೋಲ್ ಆಗಿದೆ.

ಈ ಹಿಂದೆಯಷ್ಟೆ ಶಾಹಿದ್ ಕಪೂರ್ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಫೋಟೊದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್,ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ. ಚಿತ್ರ ಡಿಸೆಂಬರ್ 1ಕ್ಕೆ ಬಿಡುಗಡೆಯಗುವ ನಿರೀಕ್ಷೆಯಿದೆ.

 

 

Post Comments (+)