ಗುಜರಾತ್: ಬಿಜೆಪಿ ಕೌನ್ಸಿಲರ್‌ನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಸ್ಥಳೀಯರು

ಮಂಗಳವಾರ, ಜೂನ್ 25, 2019
27 °C

ಗುಜರಾತ್: ಬಿಜೆಪಿ ಕೌನ್ಸಿಲರ್‌ನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಸ್ಥಳೀಯರು

Published:
Updated:
ಗುಜರಾತ್: ಬಿಜೆಪಿ ಕೌನ್ಸಿಲರ್‌ನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಸ್ಥಳೀಯರು

ವಡೋದರಾ: ಯಾವುದೇ ನೋಟಿಸ್ ನೀಡದೆ ಕೊಳೆಗೇರಿಯ ಮನೆಗಳನ್ನು ನೆಲಸಮಗೊಳಿಸಲು ಮುಂದಾದ ಬಿಜೆಪಿ ಕೌನ್ಸಿಲರ್ ಅವರ ವರ್ತನೆಯಿಂದ ಕೋಪಗೊಂಡ ನಿವಾಸಿಗಳು ಬಿಜೆಪಿ ಕೌನ್ಸಿಲರ್ ಹಶ್ಮುಕ್ ಪಟೇಲ್ ಅವರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ.

ಈಗಾಗಲೇ 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕೌನ್ಸಿಲರ್ ಹಶ್ಮುಕ್ ಪಟೇಲ್ ಅವರು ಸ್ಥಳಕ್ಕೆ ಬಂದ ತಕ್ಷಣ ಅವರ ಸುತ್ತಮುತ್ತ ನಿವಾಸಿಗಳು ಗುಂಪುಗೂಡಿದ್ದಾರೆ. ಬಳಿಕ ನೋಟಿಸ್ ನೀಡದೆ ಹೇಗೆ ತೆರವುಗೊಳಿಸುವಿರಿ ಎಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಹಶ್ಮುಖ್ ಅವರ ಶರ್ಟ್ ಹರಿದುಹೋಗಿದೆ. ಇವೆಲ್ಲವೂ ವಿಡಿಯೋದಿಂದ ತಿಳಿದು ಬಂದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry