ಸರ್ಕಾರದ ಪೋಸ್ಟರ್ ಹರಿದ ಕಂಡಕ್ಟರ್ ಬಂಧನ

ಸೋಮವಾರ, ಜೂನ್ 17, 2019
31 °C

ಸರ್ಕಾರದ ಪೋಸ್ಟರ್ ಹರಿದ ಕಂಡಕ್ಟರ್ ಬಂಧನ

Published:
Updated:

ಪಿರಿಯಾಪಟ್ಟಣ: ರಾಜ್ಯ ಸರ್ಕಾರದ ಸಾಧನೆ ಸಾರುವ ಜಾಹೀರಾತಿನ ಪೋಸ್ಟರ್ ಹರಿದುಹಾಕಿದ ನಿರ್ವಾಹಕನನ್ನು ಬೆಟ್ಟದಪುರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪಿರಿಯಾಪಟ್ಟಣ ಡಿಪೊದಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿರುವ ಶಿವಾಜಿ ಬಂಧಿತರು. ಪಿರಿಯಾಪಟ್ಟಣ– ಬೆಟ್ಟದಪುರ ಮಾರ್ಗದ ಬಸ್ಸಿನಲ್ಲಿ ನಿರ್ವಾಹಕರಾಗಿರುವ ಅವರು, ಬಸ್ಸಿನಲ್ಲಿ ಹಾಕಿದ್ದ ರಾಜ್ಯ ಸರ್ಕಾರದ ಪೋಸ್ಟರ್ ಹರಿದು ಹಾಕುತ್ತಿದ್ದುದನ್ನು ಕಂಡು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅವರನ್ನೇ ಶಿವಾಜಿ ನಿಂದಿಸಿದ್ದಾರೆ. ಬಳಿಕ  ಕಾಂಗ್ರೆಸ್ ಮುಖಂಡರಿಗೆ ಸಾರ್ವಜನಿಕರು ವಿಷಯ ತಿಳಿಸಿದರು. ಈ ಮಾಹಿತಿ ಮೇರೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ, ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry