ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸೂಲಿಯಾಗದ ಸಾಲ ತಗ್ಗಿಸಲು ಆದ್ಯತೆ: ರಜನೀಶ್

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ‘ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ತಗ್ಗಿಸಲು ಮತ್ತು ಲಾಭಾಂಶ ಹೆಚ್ಚಿಸಲು ಗಮನ ನೀಡಲಾಗುವುದು’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಕ್ಷರಾಗಿ ನೇಮಕ ಆಗಿರುವ ರಜನೀಶ್‌ ಕುಮಾರ್ ತಿಳಿಸಿದ್ದಾರೆ.

‘ಬ್ಯಾಂಕ್‌ನ ಆರ್ಥಿಕ ಸ್ಥಿತಿ ಸುಧಾರಿಸಲು ವಸೂಲಿಯಾಗದ ಸಾಲದ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಬದಲಾವಣೆ ಕಂಡುಬರಲಿದೆ’ ಎಂದು ಹೇಳಿದ್ದಾರೆ.

ಈ ಹಿಂದೆ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ಗರಿಷ್ಠ ಮೊತ್ತವನ್ನು ಕಾಯ್ದಿರಿಸಲಾಗಿತ್ತು. ಅದು ಬ್ಯಾಂಕ್‌ನ ಆರ್ಥಿಕ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಮುಂದಿನ ದಿನಗಳಲ್ಲಿ ಲಾಭವನ್ನು ಹೆಚ್ಚಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ.

ಜೂನ್‌ ಅಂತ್ಯಕ್ಕೆ ಸರಾಸರಿ ಎನ್‌ಪಿಎ ಶೇ 7.40 ರಿಂದ ಶೇ 9.97ಕ್ಕೆ ಹಾಗೂ ನಿವ್ವಳ ಎನ್‌ಪಿಎ ಶೇ 4.36 ರಿಂದ ಶೇ 5.97ಕ್ಕೆ ಏರಿಕೆಯಾಗಿದೆ. ಚಿಲ್ಲರೆ ವಲಯದ ಎನ್‌ಪಿಎ ಶೇ 1.56 ರಷ್ಟು ಹೆಚ್ಚಾಗಿದ್ದು, ₹7,632 ಕೋಟಿಗೆ ತಲುಪಿದೆ. ಕೃಷಿ ವಲಯದಿಂದ ಬರಬೇಕಿರುವ ಸಾಲ ಶೇ 9.51ಕ್ಕೆ ಅಂದರೆ ₹17,988 ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT