ರೈತರಿಗೆ ನೆರವಾಗಲಿದೆ ಗೆಣಸು ಬೆಳೆ ಯೋಜನೆ

ಸೋಮವಾರ, ಮೇ 20, 2019
30 °C

ರೈತರಿಗೆ ನೆರವಾಗಲಿದೆ ಗೆಣಸು ಬೆಳೆ ಯೋಜನೆ

Published:
Updated:

ಧಾರವಾಡ: ‘ಬೆಳೆಯುವ ಮೊದಲೇ ಬೆಳೆಗೆ ಬೆಲೆ ನಿರ್ಧರಿಸುವ ಯೋಜನೆಯಿಂದ ರೈತರಿಗೆ ಸಹಕಾರಿಯಾಗಲಿದೆ’ ಎಂದು ಯಾದವಾಡ ಗ್ರಾಮದ ಮುಖಂಡ ಮಡಿವಾಳಪ್ಪ ದಿಂಡಲಕೊಪ್ಪ ಹೇಳಿದರು. ತೋಟಗಾರಿಕಾ ವಿಶ್ವವಿದ್ಯಾಲಯ, ಕಾಯಕಯೋಗಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ ಹಾಗೂ ನೆದರ್‌ಲ್ಯಾಂಡ್‌ ಮೂಲದ ನರೀಶ್ ಕಂಪೆನಿ ಸಹಯೋಗದಲ್ಲಿ ಗ್ರಾಮದಲ್ಲಿ ಬುಧವಾರ ಜರುಗಿದ ಗೆಣಸು ಬೆಳೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂಥ ಸಂದರ್ಭದಲ್ಲಿ ಕಡಿಮೆ ನೀರು ಹಾಗೂ ಖರ್ಚಿನಲ್ಲಿ ಬೆಳೆಯಬಹುದಾದ ಗೆಣಸಿಗೆ ಮೊದಲೇ ಬೆಲೆ ನಿರ್ಧರಿಸಿರುವುದು ರೈತರಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಬಾಗಲಕೋಟೆ ತೋಟಗಾರಿಕಾ ವಿವಿ ಪ್ರಯತ್ನ ಸಂತೋಷದ ವಿಷಯ. ಜತೆಗೆ ರೈತರು ಬೆಳೆದ ಗೆಣಸನ್ನು ನರೀಶ್ ಕಂಪೆನಿ ಖರೀದಿಸುವ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಟ್ಟಿರುವುದು ತುಂಬಾ ಅನುಕೂಲಕರವಾಗಿದೆ’ ಎಂದರು.

ಕಾಯಕಯೋಗಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷ ದ್ಯಾಮಣ್ಣ ಬಸಪ್ಪ ರೇವಣ್ಣವರ, ಗ್ರಾಮದ ಹಿರಿಯರಾದ ಮಡಿವಾಳಪ್ಪ ತಡಕೋಡ, ಚನ್ನಬಸಯ್ಯ ಗುಡ್ಡದಮಠ, ಬಸಣ್ಣ ಕೊಟಬಾಗಿ, ದ್ಯಾಮನ್ಣ ಅರಣ್ಣನವರ, ಕಂಪೆನಿ ನಿರ್ದೇಶಕ ನಂದೇಶ್ವರ ನಾಯ್ಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಕ್ಕೀರಪ್ಪ ಬಂಗೊಳ್ಳಿ, ತೋಟಗಾರಿಕಾ ವಿವಿ ವಿಜ್ಞಾನಿ ಡಾ. ರಾಮಚಂದ್ರ ನಾಯ್ಕ, ನರೀಶ್‌ ಇಂಕ್‌ ಕಂಪೆನಿ ನಿರ್ದೇಶಕ ಆರ್‌.ವೆಂಕಟ್‌, ರಾಜಶ್ರೀ ಕಾಂಬಳೆ, ಹನುಮಂತ ಹಿರೇಕೆರೂರ, ಬಸವರಾಜ ತಳವಾರ, ಸುರೇಶ ಕೆಲಗೇರಿ, ಬಸವರಾಜ ಮಂಡಿಹಾಳ, ಯಮನಪ್ಪ ಕಂದನವರ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry