ಕೆರೆಯಲ್ಲಿ ಮರಿಯಾನೆ ಸಾವು

ಸೋಮವಾರ, ಜೂನ್ 24, 2019
24 °C

ಕೆರೆಯಲ್ಲಿ ಮರಿಯಾನೆ ಸಾವು

Published:
Updated:
ಕೆರೆಯಲ್ಲಿ ಮರಿಯಾನೆ ಸಾವು

ಮುಂಡಗೋಡ: ತಾಲ್ಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಮೂಕನಕಟ್ಟೆ ಕೆರೆಯಲ್ಲಿ ಸುಮಾರು ಮೂರುವರೆ ವರ್ಷದ ಆನೆ ಮರಿಯೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.ಕಳೆದ ಎರಡಮೂರು ದಿನದ ಹಿಂದೆಯೇ ಆನೆ ಮರಿ ಮೃತಪಟ್ಟಿರಬಹುದೆಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

ನಾಲ್ಕೈದು ದಿನಗಳ ಹಿಂದೆಯೇ ತಾಲ್ಲೂಕಿನ ಅರಣ್ಯ ಗಡಿಭಾಗದ ಗುಂಜಾವತಿ ಅರಣ್ಯವನ್ನು ಪ್ರವೇಶಿಸಿರುವ ಕಾಡಾನೆಗಳ ಹಿಂಡು, ಅರಣ್ಯದಂಚಿನ ಭತ್ತದ ಗದ್ದೆಗಳಲ್ಲಿ ಸಂಚರಿಸಿವೆ. ಅರಣ್ಯದ ಮಧ್ಯಭಾಗದಲ್ಲಿರುವ ಮೂಕನಕಟ್ಟೆ ಕೆರೆಗೆ ನೀರು ಕುಡಿಯಲು ಬಂದಿರುವಾಗ ಕೆರೆಯಲ್ಲಿ ಬಿದ್ದಿರಬಹುದು. ಇಲ್ಲವೇ ಕಾಡಾನೆಗಳ ಜಗಳದಲ್ಲಿ ಗಾಯಗೊಂಡು ನೀರಿನಿಂದ ಮೇಲಕ್ಕೇಳದೆ ಮೃತಪಟ್ಟಿರಬಹುದೆಂದು ಅರಣ್ಯ ಅಧಿಕಾರಿ ಶಂಕಿಸಿದ್ದಾರೆ.

ಎಸಿಎಫ್ ಶಶಿಧರ, ಆರ್‌ಎಫ್‌ಒ ಸುರೇಶ ಕಲ್ಲೊಳ್ಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry