ಬಾವಿಗೆ ಬಿದ್ದು ವೃದ್ಧ, ಇಬ್ಬರು ಮಕ್ಕಳ ಸಾವು

ಬುಧವಾರ, ಜೂನ್ 19, 2019
25 °C

ಬಾವಿಗೆ ಬಿದ್ದು ವೃದ್ಧ, ಇಬ್ಬರು ಮಕ್ಕಳ ಸಾವು

Published:
Updated:

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಆಯತಪ್ಪಿ ಬಾವಿಗೆ ಬಿದ್ದ ಇಬ್ಬರು ಮೊಮ್ಮಕ್ಕಳ ರಕ್ಷಣೆಗೆ ಧಾವಿಸಿದ ವೃದ್ಧರೊಬ್ಬರು ಸೇರಿದಂತೆ ಮೂವರು ಶುಕ್ರವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹಣ್ಣಿಕೇರಿಯ ಶ್ರೀಶೈಲ ಚರಂತಿಮಠ (67), ಅವರ ಮೊಮ್ಮಕ್ಕಳಾದ ಸೋಮಯ್ಯ ಹಿರೇಮಠ (12) ಹಾಗೂ ಸಮರ್ಥ ಹಿರೇಮಠ ಸಾವಿಗೀಡಾದವರು.

ಸವದತ್ತಿ ತಾಲ್ಲೂಕಿನ ಅಸುಂಡಿಯಲ್ಲಿ ವಾಸವಾಗಿದ್ದ ಈ ಮಕ್ಕಳು, ಸೀಗಿ ಹುಣ್ಣಿಮೆ ನಿಮಿತ್ತ ಗುರುವಾರ ಅಜ್ಜನ ಮನೆಗೆ ಬಂದಿದ್ದರು. ಶುಕ್ರವಾರ ಸ್ನಾನ ಮಾಡ

ಲೆಂದು ತೋಟದ ಬಾವಿಗೆ ತೆರಳಿದ್ದರು. ಬಾವಿ ದಂಡೆಯಲ್ಲಿದ್ದ ಮಕ್ಕಳು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಆಗ ಇವರ ರಕ್ಷಣೆಗೆ ಮುಂದಾದ ಅಜ್ಜ ಶ್ರೀಶೈಲ ಅವರೂ ಕೂಡಲೇ ಬಾವಿಗೆ ಹಾರಿದ್ದಾರೆ. ಆದರೆ ಮೇಲಕ್ಕೆ ಬಾರಲು ಆಗದೇ ಮೂವರೂ ಮುಳುಗಿದ್ದಾರೆ.

ಶವಗಳನ್ನು ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ಹೊರತೆಗೆಯಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry