ಭಾನುವಾರ, ಸೆಪ್ಟೆಂಬರ್ 15, 2019
23 °C
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ‘ಪತಿ ಮಹಾಶಯನ’ ಬಂಧನ

12 ಮಹಿಳೆಯರಿಗೆ ವಿಚ್ಛೇದನ, 13ನೇ ಪತ್ನಿ ಕೊಲೆ!

Published:
Updated:
12 ಮಹಿಳೆಯರಿಗೆ ವಿಚ್ಛೇದನ, 13ನೇ ಪತ್ನಿ ಕೊಲೆ!

ಲಖನೌ: ಆತ 12 ಮಹಿಳೆಯರನ್ನು ವಿವಾಹವಾಗಿದ್ದ. ಅವರೆಲ್ಲರಿಗೂ ವಿಚ್ಛೇದನ ನೀಡಿ ದೂರ ಮಾಡಿದ. ಇದಾದ ನಂತರ 13ನೇ ಬಾರಿ ವಿವಾಹವಾದ. ಈ ಹಿಂದಿನ ಮಹಿಳೆಯರಂತೆ 13ನೇ ಮಹಿಳೆಗೆ ಅದೃಷ್ಟ ಇರಲಿಲ್ಲ. ಈಗ ಆಕೆ ಅಮಾನುಷವಾಗಿ ಹತ್ಯೆಗೀಡಾಗಿದ್ದಾಳೆ.

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ 13ನೇ ಪತ್ನಿಯನ್ನು ಕೊಂದ ಆರೋಪದ ಮೇಲೆ ಅಮೇಠಿ ನಿವಾಸಿ ಮೊಹಮ್ಮದ್‌ ಮುಸ್ತಕೀಮ್‌ ಎಂಬ ‘ಪತಿ ಮಹಾಶಯ’ನನ್ನು ಪೊಲೀಸರು ಬಂಧಿಸಿದ್ದಾರೆ.

‌ಮುಸ್ತಕೀಮ್‌ 13ನೇ ಮಹಿಳೆಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ. ಈ ದಂಪತಿಗೆ ಮೂರು ತಿಂಗಳ ಮಗು ಸಹ ಇದೆ.

‘ಪುರೆ ಕಾಳೆ ಖಾನ್‌ ಪ್ರದೇಶದ ಮುಸ್ತಕೀಮ್‌ ಪತ್ನಿಯೊಂದಿಗೆ ಕೌಟುಂಬಿಕ ವಿಷಯಗಳಿಗೆ ಯಾವಾಗಲೂ ಜಗಳ ತೆಗೆಯುತ್ತಿದ್ದ. ಕೆಲ ದಿನಗಳ ಹಿಂದೆ ಮಾವನನ್ನು ಭೇಟಿಯಾಗಿ ಪತ್ನಿ ಮಮ್ತಾಜ್‌ಗೆ (ಹೆಸರು ಬದಲಿಸಲಾಗಿದೆ) ವಿಚ್ಛೇದನ ನೀಡುವುದಾಗಿ ತಿಳಿಸಿದ್ದ’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸೋಮವಾರದಿಂದ ಕಣ್ಮರೆಯಾಗಿದ್ದ ಮಮ್ತಾಜ್‌ ಶವ ಗುರುವಾರ ರಾತ್ರಿ ಚಲಮಾವು ಗ್ರಾಮಕ್ಕೆ ಸಮೀಪದ ಮೈದಾನದಲ್ಲಿ ಪತ್ತೆಯಾಯಿತು. ಮೃತದೇಹದ ಮೇಲೆ ಹಲವು ಗಾಯದ ಗುರುತುಗಳಿದ್ದವು.

‘ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮುಸ್ತಕೀಮ್‌ ಭರವಸೆ ನೀಡಿದ ನಂತರ ಆಕೆಯನ್ನು ಮದುವೆ ಮಾಡಿಕೊಟ್ಟಿದ್ದೆ’ ಎಂದು ಮಮ್ತಾಜ್ ತಂದೆ ಹೇಳಿದ್ದಾರೆ.

14ನೇ ಮದುವೆಗೆ ಯೋಜನೆ ಸಿದ್ಧಪಡಿಸಿಕೊಂಡಿದ್ದ ಮುಸ್ತಕೀಮ್‌, ಅದಕ್ಕಾಗಿ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

Post Comments (+)