ಮೀಟರ್‌ ಬಡ್ಡಿ ವ್ಯವಹಾರ: ಬಿಜೆಪಿ ಮುಖಂಡನ ಬಂಧನ

ಬುಧವಾರ, ಜೂನ್ 19, 2019
31 °C

ಮೀಟರ್‌ ಬಡ್ಡಿ ವ್ಯವಹಾರ: ಬಿಜೆಪಿ ಮುಖಂಡನ ಬಂಧನ

Published:
Updated:
ಮೀಟರ್‌ ಬಡ್ಡಿ ವ್ಯವಹಾರ: ಬಿಜೆಪಿ ಮುಖಂಡನ ಬಂಧನ

ಬೆಂಗಳೂರು: ಅಕ್ರಮವಾಗಿ ಮೀಟರ್‌ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಕೆ.ಆರ್‌.ಪುರದ ವಿಧಾನಸಭಾ ಕ್ಷೇತ್ರದ ಬಸವಪುರ ವಾರ್ಡ್‌ನ ಬಿಜೆಪಿ ಮುಖಂಡ ಜೆ.ಪ್ರಕಾಶ್‌ (42) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಎಂಟು ವರ್ಷಗಳಿಂದ ಕೆ.ಆರ್‍.ಪುರ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರಿಂದ ಆಸ್ತಿ ಪತ್ರಗಳು, ಖಾಲಿ ಚೆಕ್‍ಗಳನ್ನು ಪಡೆದು ₹100ಕ್ಕೆ ತಿಂಗಳಿಗೆ ಶೇ 15ರಿಂದ 20ರಷ್ಟು ಬಡ್ಡಿಗೆ ಸಾಲ ಕೊಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಅದರನ್ವಯ ಕೆ.ಆರ್‌.ಪುರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

‘ಹಲವು ವರ್ಷಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿರುವ ಪ್ರಕಾಶ್‌, ತಿಂಗಳಿಗೆ ₹1.5 ಲಕ್ಷ ಬಡ್ಡಿ ಸಂಪಾದಿಸುತ್ತಿದ್ದರು. ಬಡ್ಡಿ ನೀಡದವರಿಗೆ ಕಿರುಕುಳ ನೀಡುತ್ತಿದ್ದರು. ಈಗ ಆತನ ಬಳಿಯಿಂದ ಹಲವರ ಆಸ್ತಿ ಪತ್ರಗಳು, ಚೆಕ್‌ ಪುಸ್ತಕಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬಿಜೆಪಿಗೆ ಸೇರಿದ್ದಕ್ಕೆ ಬಂಧನ: ಬಂಧನವನ್ನು ಖಂಡಿಸಿರುವ ಬಿಜೆಪಿ ಮುಖಂಡ ಮುಖಂಡ ದೇವೆಂದ್ರ, ‘ಇತ್ತೀಚೆಗಷ್ಟೆ ಕಾಂಗ್ರೆಸ್‌ನಿಂದ ಹೊರಬಂದಿದ್ದ ಪ್ರಕಾಶ್, ಬಿಜೆಪಿಗೆ ಸೇರಿದ್ದರು. ಇದೇ ಕಾರಣಕ್ಕೆ ಮೀಟರ್ ಬಡ್ಡಿ ವ್ಯವಹಾರ ಹೆಸರಿನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಲಾಗಿದೆ. ಇದರಿಂದ ಹಿಂದೆ ರಾಜಕೀಯ ಷಡ್ಯಂತ್ರವಿದೆ’ ಎಂದು ಆರೋಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry