ಸೋಮವಾರ, ಸೆಪ್ಟೆಂಬರ್ 16, 2019
26 °C
ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟಕ್ಕೆ ಚಾಲನೆ

50 ಕಿ.ಮೀ ವಿಭಾಗದಲ್ಲಿ ಕೈರನ್‌ಗೆ ಮೊದಲ ಸ್ಥಾನ

Published:
Updated:
50 ಕಿ.ಮೀ ವಿಭಾಗದಲ್ಲಿ ಕೈರನ್‌ಗೆ ಮೊದಲ ಸ್ಥಾನ

ಚಿಕ್ಕಮಗಳೂರು: ನರಸಿಂಹರಾಜಪುರ ತಾಲ್ಲೂಕಿನ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರ ಥಾನ್ ಓಟ ಸ್ಪರ್ಧೆ ಶನಿವಾರ ಆರಂಭ ವಾಯಿತು. ಕಾಫಿ ಡೇ ಪ್ಲಾಂಟೇಷನ್ಸ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಬಿ.ಸಿ.ಚಿದಂಬರ್‌ ಚಾಲನೆ ನೀಡಿದರು.

50 ಕಿ.ಮೀ ವಿಭಾಗದಲ್ಲಿ ನಾಗ್ಪು ರದ ಕೈರನ್‌ ಅವರು ಮೊದಲ ಸ್ಥಾನ ಪಡೆದರು. ದ್ವಿತೀಯ ಸ್ಥಾನ ಗುಜರಾತಿನ ಸೂರತ್‌ನ ಸಂದೀಪ್‌ ಕುಮಾರ್‌ ಪಾಲಾಯಿತು. ಮಹಾ ರಾಷ್ಟ್ರದ ಔರಾದ್‌ನ ಕುಲಭೂಷಣ್‌ ಸೂರ್ಯವಂಶಿ ತೃತೀಯ ಸ್ಥಾನ ಪಡೆ ದರು. ಬೆಂಗಳೂರಿನ ಸುಮೀತ್‌ ನಾಲ್ಕನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಭಾಗವಹಿಸಿದ್ದ ಬೆಂಗಳೂರು ನಿವಾಸಿ 84 ವರ್ಷದ ಜಗನ್ನಾಥ್ ಗಮನ ಸೆಳೆದರು.

ಕೈರನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಈ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು ರೋಚಕ ಅನುಭವ ಪಡೆದಿದ್ದೇನೆ. ಹಿತಕರ ವಾತಾವರಣ, ಮರಗಿಡಗಳ ಎಲೆಗಳ ತರ್ಪಣ, ಪಕ್ಷಿಗಳ ಕಲರವ, ಸ್ವಚ್ಛ–ಸುಂದರ ನಿಸರ್ಗ, ಮುದ ನೀಡಿತು. ಜಾಗತಿಕ ಮಟ್ಟದ ಓಟ ಸ್ಪರ್ಧೆಗಳಲ್ಲಿ ದಾಖಲೆ ಸೃಷ್ಟಿಸುವ ಮಹದಾಸೆ ಇದೆ’ ಎಂದು ಹೇಳಿದರು.

Post Comments (+)