ಭಾನುವಾರ, ಸೆಪ್ಟೆಂಬರ್ 22, 2019
23 °C

‘ಸಿನಿಮಾ ನೆನಪಿನಲ್ಲಿ ಆಭರಣ ಸಂಗ್ರಹ’

Published:
Updated:
‘ಸಿನಿಮಾ ನೆನಪಿನಲ್ಲಿ  ಆಭರಣ ಸಂಗ್ರಹ’

*ಯಾವ ಒಡವೆ ನಿಮಗೆ ಇಷ್ಟ?

ಆ್ಯಂಟಿಕ್‌ ಆಭರಣಗಳು ನನಗಿಷ್ಟ. ಈಗ ಈ ಆಭರಣಗಳೇ ಟ್ರೆಂಡ್‌. ಟೆಂಪಲ್‌ ಜ್ಯುವೆಲ್ಲರಿ, ಅನ್‌ಕಟ್‌ ಡೈಮಂಡ್‌ ಆಭರಣಗಳೂ ಸಹ ಇಷ್ಟ. ಸೀರೆ, ಸಲ್ವಾರ್‌, ಜೀನ್ಸ್‌ ಯಾವ ಬಟ್ಟೆ ತೊಡುತ್ತೇನೋ ಅದಕ್ಕೆ ಅನುಗುಣವಾಗಿ ಆಭರಣ ಧರಿಸುತ್ತೇನೆ. ಮನೆಯಲ್ಲಿ ಅಮ್ಮ, ಅಕ್ಕ, ನಾನು ಮೂವರಿಗೂ ಚಿನ್ನ ಅಂದ್ರೆ ಇಷ್ಟ. ಬೇರೆ ಕಡೆ ಹೋದಾಗ ವಿಭಿನ್ನ ವಿನ್ಯಾಸದ ಆಭರಣಗಳನ್ನು ಖರೀದಿಸುತ್ತಿರುತ್ತೇವೆ.  ನಾನು ಪ್ರತಿ ಸಿನಿಮಾ ಮಾಡಿದಾಗಲೂ  ಆ ಸಿನಿಮಾದಲ್ಲಿ ಧರಿಸಿದ ಒಂದು ಆಭರಣಗಳನ್ನು ನಾನೇ ತೆಗೆದುಕೊಂಡು, ಸಂಗ್ರಹಿಸುತ್ತೇನೆ.

*ಒಡವೆ ಧರಿಸಿದ ನೆನಪು?

ನಾನು ಸಣ್ಣವಳಿದ್ದಾಗ ಯಾವುದೋ ಕಾರ್ಯಕ್ರಮಕ್ಕೆ ಅಪ್ಪ, ಅಮ್ಮ  ಸಣ್ಣ ಕಿವಿಯೋಲೆ ಹಾಗೂ ಚೈನ್‌ ಉಡುಗೊರೆಯಾಗಿ ನೀಡಿದ್ದರು. ಇದು ಸ್ಪೆಷಲ್‌ ಗಿಫ್ಟ್‌. ಈಗಲೂ ನನ್ನ ವಾರ್ಡ್‌ರೋಬ್‌ನಲ್ಲಿ ಭದ್ರವಾಗಿದೆ.

*ಜ್ಯುವೆಲ್ಸ್‌ ಆಫ್‌ ಇಂಡಿಯಾದ ಬ್ರಾಂಡ್‌ ರಾಯಭಾರಿ. ಹೇಗನ್ನಿಸುತ್ತಿದೆ?

ಇದೇ ಮೊದಲ ಬಾರಿ ಆಭರಣ ಕಂಪೆನಿಯ ರಾಯಭಾರಿಯಾಗಿದ್ದೇನೆ. ಆಭರಣಗಳು ಅಂದರೆ ನನಗೆ ತುಂಬಾ ಇಷ್ಟ. ಈ ಅವಕಾಶ ಸಿಕ್ಕಾಗ ಸಹಜವಾಗಿ ಖುಷಿಯಾಯಿತು. ನಾನು ಜಾಹೀರಾತು ಚಿತ್ರೀಕರಣ ಸಂದರ್ಭದಲ್ಲಿ 10 ರಿಂದ 12 ಕೋಟಿ ತನಕ ಬೆಲೆಬಾಳುವ ಆಭರಣಗಳು ಹಾಕಿಕೊಂಡಿದ್ದೆ. ಎಲ್ಲಾ ಆಭರಣಗಳು ವಿಭಿನ್ನ, ವಿಶಿಷ್ಟವಾಗಿದ್ದವು. ಮುತ್ತು, ಹವಳ, ವಜ್ರ ಹೀಗೆ ಎಲ್ಲಾ ಬಗೆಯ ಹಾರ, ಬಳೆ ಇಲ್ಲಿ ಇದೆ.

*ನಿಮ್ಮ ಕನಸಿನ ಪಾತ್ರ?

ತೆಲುಗಿನ ‘ಅರುಂಧತಿ’ ಚಿತ್ರದ ಸೀಕ್ವೆಲ್‌ನಲ್ಲಿ ನಾನೇ ನಾಯಕಿಯಾಗಿ ಇರಬೇಕು ಅಂತ ಆಸೆ.

*ಸಿನಿಮಾ ಸಹಿ ಮಾಡುವಾಗ ಯಾವುದಕ್ಕೆ ಪ್ರಾಶಸ್ತ್ಯ?

ಅಭಿನಯಕ್ಕೆ ಆದ್ಯತೆ ಇರಬೇಕು. ಪಾತ್ರ ಹೇಗಿದೆ, ಚಿತ್ರದಲ್ಲಿ ನನ್ನ ಪಾತ್ರದ ಪ್ರಾಮುಖ್ಯತೆ ಏನು ಎಂಬುದನ್ನು ನೋಡುತ್ತೇನೆ. ನಾನು ಸಾಂಪ್ರದಾಯಿಕ ಹುಡುಗಿ. ಸಾಂಪ್ರದಾಯಿಕ ರೀತಿಯಲ್ಲೇ ನಾನು ತೆರೆ ಮೇಲೆ ಕಾಣಿಸಿಕೊಳ್ಳಲು ಇಷ್ಟ. ತೀರಾ ಗ್ಲಾಮರ್‌ ಪಾತ್ರಗಳಿಗೆ ನಾನು ಒಲ್ಲೆ.

‘ಅಯೋಗ್ಯ’, ‘ಉಪ್ಪಿರುಪ್ಪಿ’ ಚಿತ್ರದ ಬಗ್ಗೆ ಹೇಳಿ?

‘ಅಯೋಗ್ಯ’ ಮುಂದಿನ ವಾರದಲ್ಲಿ ಚಿತ್ರೀಕರಣ ಆರಂಭವಾಗುತ್ತಿದೆ. ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ಚಿತ್ರೀಕರಣ. ಈ ಚಿತ್ರದಲ್ಲಿ ಪದವಿ ಮುಗಿಸಿರುವ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ‘ಉಪ್ಪಿ ರುಪ್ಪಿ’ ಚಿತ್ರದ ಒಂದು ಶೆಡ್ಯೂಲ್‌ ಮುಗಿದಿದೆ. ಉಳಿದ ಭಾಗ ಸದ್ಯದಲ್ಲೇ ಆರಂಭವಾಗಲಿದೆ.  

*ಫಿಟ್‌ನೆಸ್‌ಗಾಗಿ?

ನಾನು ಡಯೆಟ್‌, ಫಿಟ್‌ನೆಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ನಾನು ಫುಡ್ಡಿ. ರುಚಿಯಾದ ಆಹಾರ ಸಿಕ್ಕಾಗಲೆಲ್ಲಾ ತಿನ್ನುತ್ತೇನೆ.

Post Comments (+)