ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಚಾರಿತ್ರಿಕ ಗೆಲುವು

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬ್ಲೋಮ್‌ಫಾಂಟೇನ್‌: ವೇಗಿ ಕಗಿಸೊ ರಬಾಡ (30ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 254ರನ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿ  ಚಾರಿತ್ರಿಕ ಸಾಧನೆ ಮಾಡಿದೆ.

2000–01ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 229ರನ್‌ಗಳಿಂದ ಗೆದ್ದಿದ್ದು  ದಕ್ಷಿಣ ಆಫ್ರಿಕಾದ ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿತ್ತು.

ಫಾಲೊ ಆನ್ ಪಡೆದು ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಬಾಂಗ್ಲಾ ತಂಡ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಯಿತು.

ಈ ತಂಡ 42.4 ಓವರ್‌ಗಳಲ್ಲಿ 172ರನ್‌ಗಳಿಗೆ ಹೋರಾಟ ಮುಗಿಸಿತು. ಮಹಮೂದುಲ್ಲಾ (43ರನ್‌) ಮಾತ್ರ ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌: 120 ಓವರ್‌ಗಳಲ್ಲಿ 4 ವಿಕೆಟ್‌ಗೆ 573 ಡಿಕ್ಲೇರ್ಡ್‌.

ಬಾಂಗ್ಲಾದೇಶ: ಮೊದಲ ಇನಿಂಗ್ಸ್: 42.5 ಓವರ್‌ಗಳಲ್ಲಿ 147 ಮತ್ತು 42.4 ಓವರ್‌ಗಳಲ್ಲಿ 172 (ಇಮ್ರುಲ್‌ ಕಯಾಸ್‌ 32, ಮಹಮೂದುಲ್ಲಾ 43; ಕಗಿಸೊ ರಬಾಡ 30ಕ್ಕೆ5, ಆ್ಯಂಡಿಲೆ ಪೆಹ್ಲುಕವಾಯೊ 36ಕ್ಕೆ3).

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್‌ ಮತ್ತು 254ರನ್‌ಗಳ ಜಯ. ಹಾಗೂ 2–0ರಲ್ಲಿ ಸರಣಿ.
ಪಂದ್ಯ ಶ್ರೇಷ್ಠ: ಕಗಿಸೊ ರಬಾಡ.
ಸರಣಿ ಶ್ರೇಷ್ಠ: ಡೀನ್‌ ಎಲ್ಗರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT