ಮರವೇರಿ ಕುಳಿತ ಯುವಕ

ಬುಧವಾರ, ಜೂನ್ 19, 2019
30 °C

ಮರವೇರಿ ಕುಳಿತ ಯುವಕ

Published:
Updated:
ಮರವೇರಿ ಕುಳಿತ ಯುವಕ

ಕೂಡ್ಲಿಗಿ: ಮದುವೆ ಮಾಡಿಸುವಂತೆ 2 ವರ್ಷದಿಂದ ಕೇಳಿದರೂ ಮನೆಯವರು ನನ್ನ ಮಾತು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಮುನಿಸಿಕೊಂಡ ಯುವಕನೊಬ್ಬ ಮರವೇರಿ ಕುಳಿತ ಪ್ರಸಂಗ ತಾಲ್ಲೂಕಿನ ಯಂಬಳಿ ವಡ್ಡರಹಟ್ಟಿಯಲ್ಲಿ ನಡೆದಿದೆ.

ಬಸವರಾಜ(32) ಮರವೇರಿ ಕುಳಿತ ಯುವಕ. ಗ್ರಾಮದಲ್ಲಿರುವ ಬೇವಿನ ಮರವೇರಿ ಕುಳಿತಿರುವ ಬಸವರಾಜ ತನಗೆ ಮದುವೆ ಮಾಡುವುದಾಗಿ ಭರವಸೆ ನೀಡಿದರೆ ಮಾತ್ರ ಕೇಳಿಗಿಳಿದು ಬರುತ್ತೇನೆ ಎಂದು ಹಠ ಹಿಡಿದ್ದಿದ್ದರು. ಗ್ರಾಮದ ಮುಖಂಡರು ಎಷ್ಟೇ ಹೇಳಿದರೂ ಬಸವರಾಜ ಕೇಳಿಗಿಳಿದು ಬಾರದೆ 30 ತಾಸುಗಳಿಂದ ಮರದಲ್ಲಿಯೇ ಕುಳಿತಿದ್ದರು.

ಗ್ರಾಮಸ್ಥರು ಕಾನ ಹೊಸಹಳ್ಳಿ ಪೊಲೀಸರಿಗೆ ಈ ಸಂಬಂಧ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪಿಎಸ್‌ಐ ಕೃಷ್ಣನಾಯ್ಕ್ ಹಾಗೂ ಸಿಬ್ಬಂದಿ ಯುವಕನನ್ನು ಮರದಿಂದ ಕೆಳಗಿಸುವಲ್ಲಿ ಯಶಸ್ವಿಯಾದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry