ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಕೆ.ಜಿ.ಗೆ ₹ 5 ಹೆಚ್ಚಳ

Last Updated 10 ಅಕ್ಟೋಬರ್ 2017, 6:14 IST
ಅಕ್ಷರ ಗಾತ್ರ

ಹಾಸನ: ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ವಾರದ ಹಿಂದೆ ಕೆ.ಜಿ. ₹ 25 ಇದ್ದದ್ದು, ಈಗ ₹ 30 ರಂತೆ ಮಾರಾಟವಾಗುತ್ತಿದೆ. ವಿವಿಧ ಪ್ರದೇಶಗಳಿಂದ ಮಾರುಕಟ್ಟೆಗೆ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಏಕಾಏಕಿ ₹ 5 ಏರಿಕೆ ಆಗಿದೆ.

‘ಜಿಲ್ಲೆಗೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆವಕ ಆಗುತ್ತದೆ. ಕೆಲ ದಿನಗಳಿಂದ ಉತ್ತರ ಭಾರತದಲ್ಲಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಸಾಕಷ್ಟು ಬೆಳೆ ನಾಶವಾಗಿದೆ. ಈ ಕಾರಣದಿಂದ ಮಾರುಕಟ್ಟೆಗೆ ಬರುವ ಈರುಳ್ಳಿ ಕಡಿಮೆ ಆಗಿದೆ’ ಎಂದು ವ್ಯಾಪಾರಿ ಹರ್ಷ ತಿಳಿಸಿದರು.

ಹಣ್ಣುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಕೆ.ಜಿ ಸೇಬು ₹ 100, ಡಜನ್‌ ಬಾಳೆಹಣ್ಣು ₹ 40, ಕಿತ್ತಳೆ ಹಣ್ಣು ಕೆ.ಜಿ. ಗೆ ₹ 80, ದಾಳಿಂಬೆ ₹ 70, ಮೂಸಂಬಿ ₹ 60, ದ್ರಾಕ್ಷಿ ₹120ಕ್ಕೆ ಮಾರಾಟವಾಗುತ್ತಿದೆ. ಹುರುಳಿ ಕಾಯಿ ಕೆ.ಜಿ.ಗೆ ₹ 60, ಆಲೂಗೆಡ್ಡೆ ₹ 20 ಹಾಗೂ ಟೊಮೆಟೊ ₹ 15 ರಂತೆ ಲಭ್ಯ ಇದೆ.

ಹಾಗೆಯೇ ಕೊತ್ತಂಬರಿ ₹10, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪು ಕಂತೆಗೆ ₹ 5 ರಿಂದ ₹ 6 ರಂತೆ ಮಾರಾಟವಾಗುತ್ತಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ತರಕಾರಿ ಬೆಲೆಯಲ್ಲಿ ಅಂತಹ ಏರಿಕೆ ಕಂಡು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT