ಜನಸಂಖ್ಯೆ ಸಮಸ್ಯೆಯಲ್ಲ, ದೇಶದ ಸಂಪನ್ಮೂಲ

ಮಂಗಳವಾರ, ಜೂನ್ 18, 2019
24 °C

ಜನಸಂಖ್ಯೆ ಸಮಸ್ಯೆಯಲ್ಲ, ದೇಶದ ಸಂಪನ್ಮೂಲ

Published:
Updated:

ಉಡುಪಿ: ದೇಶದ ಜನಸಂಖ್ಯೆಯನ್ನು ಸಾಮಾಜಿಕ ಪಿಡುಗಿನಂತೆ ಬಿಂಬಿಸ ಲಾಗುತ್ತಿದೆ. ಇದರ ಬಗ್ಗೆ ಸರ್ಕಾರ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಜನಸಂಖ್ಯೆ ಸಮಸ್ಯೆಯಲ್ಲ, ದೇಶದ ಸಂಪನ್ಮೂಲ ಶಕ್ತಿ ಎಂದು ರಾಷ್ಟ್ರೀಯ ಸ್ವಯಂ ಸೇವಾ ದಕ್ಷಿಣ ಪ್ರಾಂತ ಸಂಪರ್ಕ ಅಧಿಕಾರಿ ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಸಾಮರಸ್ಯ ವೇದಿಕೆ ಇತ್ತೀಚೆಗೆ ಉಡುಪಿ ಕೇಶವ ಕೃಪಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಜನ ಸಂಖ್ಯೆ ಏರುಪೇರು ಪರಿಣಾಮ’ ವಿಷಯ ಕುರಿತು ಮಾತನಾಡಿದರು.

ವರ್ತಮಾನ ಕಾಲದ ಅಖಂಡ ಭಾರತದ ಕಲ್ಪನೆಯನ್ನು ನೋಡ ಬೇಕಾದರೆ ಸ್ವಾತಂತ್ರ್ಯ ಪೂರ್ವ ಭಾರತದ ಭೂಪಟವನ್ನು ಅವ ಲೋಕನ ಮಾಡಬೇಕಾಗಿದೆ. 20ನೇ ಶತಮಾನದ ಆರಂಭದಲ್ಲಿದ್ದ ಹಿಂದೂ ಗಳ ಸಂಖ್ಯೆ ಮತ್ತು ಈಗಿರುವ ಸಂಖ್ಯೆ ನೋಡಿದರೆ ಶೇಕಡವಾರು ಪ್ರಮಾ ಣದಲ್ಲಿ ಇಳಿಕೆಯಾಗಿದೆ.

ಯಾವ ಭಾಗದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆಯೋ ಅಲ್ಲಲ್ಲಿ ದೇಶ ವಿಭಜನೆಯಾಗಿದೆ. ಹಿಂದೂಗಳು ಇನ್ನೂ ಜಾಗೃತರಾಗದಿದ್ದರೆ ವಿಭಜನೆಗಳು ಮುಂ ದುವರಿಯಲಿದೆ ಎಂದು ತಿಳಿಸಿದರು.

ಇನ್ನೂ ಆತಂಕಕಾರಿ ವಿಷಯವೇ ನೆಂದರೆ ಜಮ್ಮು ಮತ್ತು ಕಾಶ್ಮೀರ, ನಾಗಾ ಲ್ಯಾಂಡ್, ಮಿಜೋರಾಂ, ಮೇಘಾಲಯ, ಮಣಿಪುರ ಮತ್ತು ಅರುಣಾಚಲ ಪ್ರದೇಶ ಈ ಆರು ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ.

ಕೇರಳ, ಅಸ್ಸಾಂ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ್ ರಾಜ್ಯಗಳಲ್ಲಿ ಹಿಂದೂ ಸಂಖ್ಯೆ ಶೇಕಡಾವಾರು ಗಣನೀಯವಾಗಿ ಕುಸಿತ ಕಾಣುತ್ತಿದ್ದು, ಇದೇ

ರೀತಿ ಮುಂದುವರೆದರೆ ವಿಶ್ಲೇಷ ಣೆಯ ಪ್ರಕಾರ 2060ರಲ್ಲಿ ದೇಶದಲ್ಲಿ ಹಿಂದೂಗಳು ಅಲ್ಪಸಂ ಖ್ಯಾತರಾಗಲಿದ್ದಾರೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಮಾತನಾಡಿ, ಇಂದು ಮನುಷ್ಯರ ನಡುವಿನ ಮಾನವೀಯ ಸಂಬಂಧಗಳು ಕಡಿಮೆಯಾಗಿವೆ. ಮಕ್ಕಳಿಗೆ ವೈಯಕ್ತಿಕ ಸಂಬಂಧಗಳಿಗೆ ಬೆಲೆ ನೀಡುವ ಶಿಕ್ಷಣ ಸಿಗುತ್ತಿಲ್ಲ.

ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗಿವೆ. ಗ್ರಾಮ ಜೀವನದಿಂದ ಜನರು ಫ್ಲಾಟ್‌ ಜೀವನದತ್ತ ಹೋಗು ತ್ತಿದ್ದಾರೆ ಎಂದರು. ಸಾಯಿರಾಧ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಮನೋಹರ್ ಶೆಟ್ಟಿ, ಬಿ.ಕೆ. ಯಶವಂತ್, ಮಟ್ಟಾರು ಗಣೇಶ್ ಕಿಣಿ, ಶಾಮಲಾ ಕುಂದರ್, ವಸಂತ್, ತೋನ್ಸೆ ಗಣೇಶ್ ಕಿಣಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry