ಕಿರುತೆರೆಯಲ್ಲಿ ಪುನೀತ್ ಬಂಧ

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕಿರುತೆರೆಯಲ್ಲಿ ಪುನೀತ್ ಬಂಧ

Published:
Updated:
ಕಿರುತೆರೆಯಲ್ಲಿ ಪುನೀತ್ ಬಂಧ

‘ನಾಲ್ಕು ವರ್ಷಗಳ ನಂತರ ಮತ್ತೆ ಟೆಲಿವಿಷನ್‌ಗೆ ಬರ್ತಿದ್ದೀನಿ. ಎಕ್ಸೈಟ್‌ಮೆಂಟ್ ಖಂಡಿತ ಇದೆ. ಸ್ಪರ್ಧಿಗಳು, ಗೆಸ್ಟ್‌ಗಳ ಬಗ್ಗೆ ನಿರೀಕ್ಷೆ ಇದೆ. ಒಂಥರಾ ಥ್ರಿಲ್ ಆಗ್ತಿದೆ. ಇದು ಒಂದು ಫ್ಯಾಮಿಲಿ ಷೋ. ಅಜ್ಜ–ಅಜ್ಜಿ, ಅಪ್ಪ–ಅಮ್ಮ, ಚಿಕ್ಕಮ್ಮ–ಚಿಕ್ಕಪ್ಪ ಹೀಗೆ ಇವರೆಲ್ಲರ ಜೊತೆಗೆ ಬೆಳೆದ ಕುಟುಂಬ ಹೇಗಿರುತ್ತೆ ಅನ್ನೋ ಥ್ರಿಲ್ ಈ ಷೋನಲ್ಲಿ ಇರುತ್ತೆ...’

ಕನ್ನಡದ ’ರಾಜಕುಮಾರ’ ಇಷ್ಟು ಮಾತ್ರ ಹೇಳಿ ಸುಮ್ಮನಾಗಿಲ್ಲ.

‘ಒಮ್ಮೆ ಕಾರ್ಯಕ್ರಮದ ಪ್ರಸಾರ ಶುರುವಾದ ಮೇಲೆ ನಾನು ನಂಬಿರುವ ನಮ್ಮ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಅನ್ನೋ ಕಾತರ ನನ್ನಲ್ಲಿದೆ...’ ಎಂದು ವಿನಯದ ಮಾತುಗಳನ್ನೂ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಮತ್ತೆ ಕಿರುತೆರೆ ಬರ್ತಿದ್ದಾರೆ ಅಂತ ಇಷ್ಟು ದಿನ ಅಲ್ಲಿಷ್ಟು–ಇಲ್ಲಿಷ್ಟು ಸುದ್ದಿ ಓದಿ ಖುಷಿ ಪಟ್ಟಿದ್ದವರಿಗೆ ಕಲರ್ಸ್‌ ಕನ್ನಡ ವಾಹಿನಿಯು ಮಂಗಳವಾರ ಮಧ್ಯಾಹ್ನ ಹಬ್ಬದೂಟವನ್ನೇ ಉಣಬಡಿಸಿತು. ಕಲರ್ಸ್‌ ವಾಹಿನಿಯ ಫೇಸ್‌ಬುಕ್‌ ಪುಟಕ್ಕೆ ಅಪ್‌ಲೋಡ್ ಆದ ವಿಡಿಯೊದಲ್ಲಿ ತಮ್ಮ ಕಿರುತೆರೆ ಎಂಟ್ರಿಯನ್ನು ಅಪ್ಪು ಅಧಿಕೃತವಾಗಿ ಘೋಷಿಸುವ ಮಾತುಗಳಿದ್ದವು. ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್, ನೂರಾರು ಶೇರ್‌ ಪಡೆದುಕೊಂಡು ವೈರಲ್ ಆಯಿತು. 

ಪ್ರೊಮೊ ಶೂಟಿಂಗ್‌ನಲ್ಲಿ ಕಲರ್ಸ್‌ ಕನ್ನಡ ವಾಹಿನಿಯ ವಿವಿಧ ಧಾರಾವಾಹಿಗಳ ನಟ–ನಟಿಯರೂ ಪಾಲ್ಗೊಂಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಆದರೆ ರಿಯಾಲಿಟಿ ಶೋದ ಹೆಸರು ಮತ್ತು ಸ್ವರೂಪದ ಬಗ್ಗೆ ಕುತೂಹಲ ಉಳಿಸುವಂತೆಯೇ ಎಲ್ಲರ ಮಾತುಗಳೂ ಇರುವುದು ವಿಶೇಷ.

ಈ ಪ್ರೊಮೊ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈಗಾಗಲೇ ಪ್ರಸಾರವಾಗುತ್ತಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry