ಕೆರೆ ಕೋಡಿ ಒಡೆದು ಹಾನಿ: ಮೈಸೂರು–ಬೆಂಗಳೂರು ಸಂಚಾರಕ್ಕೆ ಅಡ್ಡಿ

ಸೋಮವಾರ, ಮೇ 27, 2019
24 °C

ಕೆರೆ ಕೋಡಿ ಒಡೆದು ಹಾನಿ: ಮೈಸೂರು–ಬೆಂಗಳೂರು ಸಂಚಾರಕ್ಕೆ ಅಡ್ಡಿ

Published:
Updated:
ಕೆರೆ ಕೋಡಿ ಒಡೆದು ಹಾನಿ: ಮೈಸೂರು–ಬೆಂಗಳೂರು ಸಂಚಾರಕ್ಕೆ ಅಡ್ಡಿ

ರಾಮನಗರ: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಸಮೀಪ ಗಾಣಾಳುದೊಡ್ಡಿ ಕೆರೆಯ ಕೋಡಿ ಒಡೆದು ನೀರು ರಸ್ತೆಗೆ ನುಗ್ಗಿದೆ.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಈ ಮಾರ್ಗವಾಗಿ ಮೈಸೂರು–ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು ಪರದಾಡುವಂತೆ ಆಗಿದೆ. ಕನಕಪುರ ತಾಲ್ಲೂಕಿನಲ್ಲಿ ಗರಿಷ್ಠ 174 ಮಿ.ಮೀ ನಷ್ಟು ಮಳೆ ಸುರಿದಿದೆ.

ತಾಲ್ಲೂಕಿನ ಕಂಚುಗಾರನಹಳ್ಳಿಯಲ್ಲಿ 124 ಮಿ.ಮೀ ಹಾಗೂ ಟಿ. ಹೊಸಹಳ್ಳಿ ವ್ಯಾಪ್ತಿಯಲ್ಲಿ 128 ಮಿ.ಮೀ ಮಳೆ ದಾಖಲಾಗಿದೆ.

ರಾಮನಗರ, ಮಾಗಡಿ ಹಾಗೂ ಚನ್ನಪಟ್ಟಣ ತಾಲ್ಲೂಕುಗಳಲ್ಲಿಯೂ ಭಾರಿ ಮಳೆ ಸುರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry