ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ಕಾಯಿ ಮೂಲಕ ರಕ್ತದ ಗುಂಪನ್ನು ಪತ್ತೆ ಮಾಡಬಹುದು!

Last Updated 11 ಅಕ್ಟೋಬರ್ 2017, 10:25 IST
ಅಕ್ಷರ ಗಾತ್ರ
ADVERTISEMENT

ರಾಯಪುರ: ತೆಂಗಿನ ಕಾಯಿ ಮೂಲಕ ಜಲ ಮೂಲ ಪತ್ತೆ ಹಚ್ಚುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ತೆಂಗಿನ ಕಾಯಿ ಮೂಲಕ ಮನುಷ್ಯರ ರಕ್ತದ ಗುಂಪನ್ನು ಪತ್ತೆ ಹಚ್ಚಬಹುದು ಎಂದು ತೋರಿಸಿಕೊಡುವ ಮೂಲಕ ಬಿ. ಡಿ. ಗುಹಾ ಎಂಬುವರು ಅಚ್ಚರಿ ಮೂಡಿಸಿದ್ದಾರೆ.

2005 ರಿಂದಲೂ ಚತ್ತೀಸ್‌ಗಡದ ಗುಹಾ ಈ ಪ್ರಯೋಗ ಮಾಡುತ್ತಿದ್ದಾರೆ. ಇದರಲ್ಲಿ ಶೇ.90 ರಷ್ಟು ಯಶಸ್ವಿಯಾಗಿದ್ದೇನೆ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುಹಾ ನೂರಾರು ಜನರ ರಕ್ತದ ಗುಂಪನ್ನು ತೆಂಗಿನಕಾಯಿ ಮೂಲಕ ಪತ್ತೆ ಹಚ್ಚಿದ್ದಾರೆ. ವ್ಯಕ್ತಿಯ ಮೇಲೆ ತೆಂಗಿನಕಾಯಿ ಹಿಡಿದಾಗ ಅದು ಯಾವ ಕೋನದಲ್ಲಿ ನಿಲ್ಲುತ್ತದೆ ಎಂಬುದನ್ನು ಆಧರಿಸಿ ಬ್ಲಡ್ ಗ್ರೂಪ್ ಕಂಡು ಹಿಡಿಯುವುದಾಗಿ ಗುಹಾ ತಿಳಿಸಿದ್ದಾರೆ. ಆದರೆ ವ್ಯಕ್ತಿಯ ಕೆಳ ಭಾಗದಲ್ಲಿ ನೀರಿನ ಮೂಲ ಇದ್ದರೆ ರಕ್ತದ ಗುಂಪನ್ನು ಪತ್ತೆ ಮಾಡುವುದು ಕಷ್ಟ ಎನ್ನುತ್ತಾರೆ ಅವರು.

ವ್ಯಕ್ತಿಯೊಬ್ಬರ ಮೇಲೆ ತೆಂಗಿನಕಾಯಿ ಹಿಡಿದಾಗ ಅದು 60 ಡಿಗ್ರಿ ಕೋನದಲ್ಲಿದ್ದರೆ A+, 75 ಡಿಗ್ರಿಯಲ್ಲಿದ್ದರೆ B+,  90 ಡಿಗ್ರಿ ಕೋನದಲ್ಲಿದ್ದರೆ O+,  ಮತ್ತು 180 ಡಿಗ್ರಿಯಲ್ಲಿದ್ದರೆ O-  ಎಂದು ಪತ್ತೆ ಹಚ್ಚಿರುವುದಾಗಿ ಗುಹಾ ಮಾಹಿತಿ ನೀಡಿದ್ದಾರೆ.  ಗುಹಾ ಪತ್ತೆ ಹಚ್ಚಿದ ನೂರಾರು ಜನರ ರಕ್ತದ ಗುಂಪನ್ನು ಮತ್ತೆ  ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಈ ಎರಡು ಟೆಸ್ಟ್‌ಗಳ ಫಲಿತಾಂಶ ಒಂದೇ ಆಗಿರುವುದರ ಬಗ್ಗೆ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಈ ಪ್ರಯೋಗ ಅಪಾಯಕಾರಿ ಮತ್ತು ಅವೈಜ್ಞಾನಿಕ ಎಂದು ವೈದ್ಯ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT