15ರಿಂದ ಬಾಗಲಗುಂಟೆ ಮಾರಮ್ಮ ಜಾತ್ರೆ

ಬುಧವಾರ, ಜೂನ್ 19, 2019
23 °C

15ರಿಂದ ಬಾಗಲಗುಂಟೆ ಮಾರಮ್ಮ ಜಾತ್ರೆ

Published:
Updated:

ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಮೀಪದ ಬಾಗಲಗುಂಟೆ ಮತ್ತು ಮಲ್ಲಸಂದ್ರದಲ್ಲಿ ಇದೇ 15ರಿಂದ 17ರವರೆಗೆ ಮಾರಮ್ಮ, ಜುಂಜಪ್ಪ ಮತ್ತು ಆಂಜನೇಯಸ್ವಾಮಿಯ ವೈಭವದ ಜಾತ್ರಾ ಮಹೋತ್ಸವ ಜರುಗಲಿದೆ.

15ರಂದು ಬಾಗಲಗುಂಟೆಯಲ್ಲಿ ಕುರ್ಜಮರ ಎತ್ತುವುದು, ಪ್ರಮುಖ ಬೀದಿಗಳಲ್ಲಿ ಮಾರಮ್ಮದೇವಿಯ ಮೆರವಣಿಗೆ, ರಾತ್ರಿ 11 ಗಂಟೆಗೆ ಅಗ್ನಿಕುಂಡಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮ ನಡೆಯಲಿದೆ.

16ರಂದು ಬೆಳಿಗ್ಗೆ ಮಲ್ಲಸಂದ್ರದಲ್ಲಿ ಆಂಜನೇಯಸ್ವಾಮಿಗೆ ಬೆಲ್ಲದಾರತಿ, ದೊಡ್ಡದಾರತಿಯೊಂದಿಗೆ ಬಾಗಲಗುಂಟೆ ಮಾರಮ್ಮ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಸೇವೆ, ಅಲಗುಸೇವೆ, ಅಗ್ನಿಕುಂಡದಲ್ಲಿ ನಡೆಯುವುದು, ಸಂಜೆ ಪಳೇಕಮ್ಮ ಮತ್ತು ಮುತ್ತುರಾಯಸ್ವಾಮಿಗೆ ಬೆಲ್ಲದಾರತಿ ಮಾಡಲಾಗುತ್ತದೆ.

17ರಂದು ಬೆಳಿಗ್ಗೆ ಮಲ್ಲಸಂದ್ರದಲ್ಲಿ ಜುಂಜಪ್ಪಸ್ವಾಮಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಶಾಸಕ ಎಸ್.ಮುನಿರಾಜು ಜಾತ್ರೆಗೆ ಚಾಲನೆ ನೀಡಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry