ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಹಟ್ಟಿ: ಭಾರಿ ಮಳೆಗೆ ತುಂಬಿದ ಕೆರೆ

Last Updated 13 ಅಕ್ಟೋಬರ್ 2017, 4:46 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ (ಬಾಗಲಕೋಟೆ) : ಐದಾರು ದಿನಗಳಿಂದ ರಬಕವಿ ಬನಹಟ್ಟಿ ಸುತ್ತಮುತ್ತ ಸತತವಾಗಿ ಮಳೆ ಸುರಿಯುತ್ತಿದ್ದು, ಇಲ್ಲಿನ ಕೆರೆ ತುಂಬಿದೆ. ಇದಲ್ಲದೆ, ವಿವಿಧ ಕಡೆಗಳಲ್ಲಿ ನಿರ್ಮಿಸಲಾದ ಬಾಂದಾರಗಳು ಮೈತುಂಬಿಕೊಂಡಿದ್ದು, ಮೇಲಿನಿಂದ ಬೀಳುತ್ತಿರುವ ನೀರು ನೋಡುಗರನ್ನು ಆಕರ್ಷಿಸುತ್ತಿದೆ.

ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ತೋಟದ ರಸ್ತೆಯು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಈ ಭಾಗದಲ್ಲಿರುವ ಕಾಲುವೆಗಳಿಗೆ ಮರುಜೀವ ಬಂದಿದೆ. ಆದರೆ, ಕೆರೆಯಿಂದ ಹೆಚ್ಚಾದ ನೀರು ಹೊರಗೆ ಬರುತ್ತಿರುವುದರಿಂದ ಜಗದಾಳ ಮತ್ತು ಚಿಮ್ಮಡ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.

ಬಹಳ ದಿನಗಳ ನಂತರ ಬನಹಟ್ಟಿಯ ಕೆರೆ ತುಂಬಿದ್ದರಿಂದ ತೋಟದ ರಸ್ತೆಯ ಕಾಲುವೆಗಳು ತುಂಬಿ ಹರಿಯುತ್ತಿವೆ. ‘ಉತ್ತಮವಾದ ಮಳೆಯಿಂದಾಗಿ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ’ ಎಂದು ರೈತರಾದ ಶಿವು ಗುಂಡಿ, ಸಿದ್ದು ಗೌಡಪ್ಪನವರ, ಅಪ್ಪು ಪಾಟೀಲ, ಸದಾಶಿವ ಬಂಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT